ಬೆಂಗಳೂರಿನಿಂದ ಮತ್ತೆ 60 ವಿಮಾನಗಳ ಹಾರಾಟ ರದ್ದುಪಡಿಸಿದ ಇಂಡಿಗೊ
Photo Credit : PTI
ಹೊಸದಿಲ್ಲಿ,ಡಿ.11: ಇಂಡಿಗೊ ವಿಮಾನ ಪ್ರಯಾಣಿಕರ ಗೋಳಾಟ ಮುಂದುವರಿದಿದ್ದು, ಗುರುವಾರ ಬೆಂಗಳೂರು ವಿಮಾನನಿಲ್ದಾಣದಲ್ಲಿ 60 ವಿಮಾನಗಳ ಹಾರಾಟವನ್ನು ಇಂಡಿಗೊ ವಾಯುಯಾನ ಸಂಸ್ಥೆ ರದ್ದುಗೊಳಿಸಿದೆ.
ನೂತನ ಪೈಲಟ್ ಹಾಗೂ ಇತರ ಸಿಬ್ಬಂದಿಯ ಕರ್ತವ್ಯದ ನಿಯಮಾವಳಿಗಳ ಅನುಷ್ಠಾನಕ್ಕೆ ತರುವಲ್ಲಿ ವೈಫಲ್ಯ ಉಂಟಾಗಿರುವ ಹಿನ್ನೆಲೆಯಲ್ಲಿ ವ್ಯಾಪಕವಾಗಿ ಇಂಡಿಗೋ ಸಂಸ್ಥೆಯ ವಿಮಾನಗಳ ಸೇವೆಯಲ್ಲಿ ಅಡಚರಣೆ ಉಂಟಾಗಿದೆ.
ನಾಗರಿಕ ವಾಯುಯಾನ ಮಹಾನಿರ್ದೇಶನಾಲಯ(ಡಿಜಿಸಿಎ)ವು ಗುರುವಾರ 1950 ವಿಮಾನಗಳ ಹಾರಾಟವನ್ನು ಪರಿಶೀಲನೆಗೊಳಿಪಡಿಸಿದರೂ, ಈ ವಿಮಾನಗಳ ಹಾರಾಟ ರದ್ದುಗೊಂಡಿದೆ.
ಇಂಡಿಗೊ ವಾಯುಯಾನ ಸಂಸ್ಥೆಯು 60 ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ. ಬೆಂಗಳೂರಿನ ಆಗಮಿಸುವ 32 ವಿಮಾನಗಳು ಹಾಗೂ ನಿರ್ಗಮಿಸುವ 28 ವಿಮಾನಯಾನಗಳನ್ನು ರದ್ದುಪಡಿಸಲಾಗಿದೆ.
ಈ ಮಧ್ಯೆ, ಇತ್ತೀಚೆಗೆ ವಿಮಾನಗಳ ನಿರ್ವಹಣೆಯಲ್ಲಿ ಉಂಟಾಗಿರುವ ಇಂಡಿಗೊ ಸಂಸ್ಥೆಯ ಸಿಇಓ ಪೀಟರ್ ಎಲ್ಬರ್ಸ್ ಅವರಿಗೆ ದತ್ತಾಂಶ ಸೇರಿದಂತೆ ಸಮಗ್ರ ವರದಿಯೊಂದನ್ನು ಸಲ್ಲಿಸುವಂತೆ ಹಾಗೂ ಗುರುವಾರ ಸಂಜೆ 3 ಗಂಟೆಯ ಒಳಗೆ ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಗುರುವಾರದಂದು ತನ್ನ 1950 ವಿಮಾನಗಳು ಕಾರ್ಯನಿರ್ವಹಿಸುವುದನ್ನು ನಿರೀಕ್ಷಿಸುವುದಾಗಿ ಇಂಡಿಗೋ ಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿತ್ತು.
ಪ್ರಸಕ್ತ ಇಂಡಿಗೋ ಏರ್‌ಲೈನ್ಸ್ ದಿನಂಪ್ರತಿ, ಹಾಲಿ ಚಳಿಗಾಲದಲ್ಲಿ 2200 ವಿಮಾನಯಾನಗಳನ್ನು ನಿರ್ವಹಿಸಬೇಕಾಗಿತ್ತು. ಆದರೆ ಆ ಸಂಸ್ಥೆಯ ಕಾರ್ಯನಿರ್ವಹಣೆಯನ್ನು ಸುಸ್ಥಿರಗೊಳಿಸಲು ಹಾಗೂ ವಿಮಾನಯಾನಗಳ ರದ್ದತಿಯನ್ನು ಕನಿಷ್ಠಗೊಳಿಸುವುದಕ್ಕಾಗಿ ವಿಮಾನಹಾರಾಟವನ್ನು ಸರಕಾರವು ಶೇ.10ರಷ್ಟು ಕಡಿಮೆಗೊಳಿಸಿದೆ.
ಬುಧವಾರದಂದು ಇಂಡಿಗೋ ದಿಲ್ಲಿ, ಬೆಂಗಳೂರು ಹಾಗೂ ಮುಂಬೈ ವಿಮಾನನಿಲ್ದಾಣಗಳಿಂದ 220 ವಿಮಾನಯಾನಗಳ ಹಾರಾಟವನ್ನು ರದ್ದುಪಡಿಸಿತ್ತು ದಿಲ್ಲಿಯಲ್ಲಿ ಅತ್ಯಧಿಕ 137 ವಿಮಾನಗಳ ಹಾರಾಟವು ರದ್ದುಗೊಂಡಿದ್ದವು.