×
Ad

ವಾಯು ಗುಣಮಟ್ಟ ಸುಧಾರಿಸುವ ವರೆಗೆ ದಿಲ್ಲಿಯಿದ ಸಂಸತ್ಅಧಿವೇಶವನ್ನು ಸ್ಥಳಾಂತರಿಸಿ: ಸರಕಾರವನ್ನು ಆಗ್ರಹಿಸಿದ ಬಿಜೆಡಿ ಸಂಸದ

Update: 2025-12-11 22:46 IST

ಮಾನಸ್ ರಂಜನ್ ಮಂಗರಾಜ್ | Photo Credit : PTI  

ಹೊಸದಿಲ್ಲಿ, ಡಿ. 11: ವಾಯು ಗುಣಮಟ್ಟ ಸುಧಾರಿಸುವ ವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ ಹಾಗೂ ಬಜೆಟ್ ಅಧಿವೇಶನವನ್ನು ದಿಲ್ಲಿಯ ಹೊರಗೆ ಸ್ಥಳಾಂತರಿಸುವಂತೆ ಬಿಜೆಡಿಯ ರಾಜ್ಯ ಸಭಾ ಸದಸ್ಯ ಮಾನಸ್ ರಂಜನ್ ಮಂಗರಾಜ್ ಗುರುವಾರ ಸರಕಾರವನ್ನು ಆಗ್ರಹಿಸಿದ್ದಾರೆ.

ದಿಲ್ಲಿಯ ವಾರ್ಷಿಕ ಮಾಲಿನ್ಯದ ಬಿಕ್ಕಟ್ಟನ್ನು ‘‘ಮಾನವ ನಿರ್ಮಿತ ವಿಪತ್ತು’’ ಎಂದು ಅವರು ಕರೆದರು.

ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಒಡಿಶಾದ ಮಂಗರಾಜ್, ದಿಲ್ಲಿಯ ವಾಯು ಮಾಲಿನ್ಯದ ಬಗ್ಗೆ ಮಾತನಾಡಿದರು. ನೈಸರ್ಗಿಕ ವಿಕೋಪಗಳಿಗೆ ತನ್ನ ರಾಜ್ಯದ ಪರಿಣಾಮಕಾರಿ ಪ್ರತಿಕ್ರಿಯೆ ಬಗ್ಗೆ ಅವರು ಮಾತನಾಡಿದರು. ದಿಲ್ಲಿಯಲ್ಲಿ ಮಾಲಿನ್ಯವನ್ನು ನಿಭಾಯಿಸಲು ಅದೇ ತುರ್ತು ಅಗತ್ಯವಿದೆ ಎಂದು ಅವರು ಹೇಳಿದರು.

ನಾನು ಒಡಿಶಾದಿಂದ ಬಂದಿದ್ದೇನೆ. ಅದು ಚಂಡ ಮಾರುತ, ಪ್ರವಾಹ ಹಾಗೂ ಇತರ ನೈಸರ್ಗಿಕ ವಿಕೋಪಗಳನ್ನು ಬಹಳ ಶಿಸ್ತಿನಿಂದ ನಿರ್ವಹಿಸುವ ರಾಜ್ಯ. ನಿಜವಾದ ಬಿಕ್ಕಟ್ಟು ಹೇಗಿರುತ್ತದೆ ಎಂದು ನನಗೆ ತಿಳಿದಿದೆ. ಆದರೆ, ದಿಲ್ಲಿಯ ಬಗ್ಗೆ ನನಗೆ ಆತಂಕವಿದೆ ಎಂದು ಅವರು ಹೇಳಿದರು.

‘‘ಅವರು ತೊಂದರೆಗೆ ಒಳಗಾಗುತ್ತಿರುವುದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದು ಸಾಮಾನ್ಯ ಎಂಬಂತೆ ನಟಿಸಲು ಸಾಧ್ಯವಿಲ್ಲ. ಗರಿಷ್ಠ ಮಾಲಿನ್ಯ ತಿಂಗಳಲ್ಲಿ ಸಂಸತ್ತಿನ ನಿರ್ಣಾಯಕ ಅಧಿವೇಶನವನ್ನು ನಡೆಸುವ ಮೂಲಕ ಅನಗತ್ಯವಾಗಿ ಜೀವಗಳನ್ನು ಅಪಾಯಕ್ಕೆ ಒಡ್ಡುತ್ತೇವೆ’’ ಎಂದು ಮಂಗರಾಜ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News