×
Ad

ದಿಲ್ಲಿ ಸ್ಪೋಟದ ಬೆನ್ನಲ್ಲೇ ಹಲವು CRPF ಶಾಲೆಗಳಿಗೆ ಬಾಂಬ್ ಬೆದರಿಕೆ

Update: 2024-10-22 14:44 IST

PC : PTI 

ಹೊಸದಿಲ್ಲಿ: ದಿಲ್ಲಿಯ ಸಿಆರ್ ಪಿಎಫ್(CRPF) ಶಾಲೆ ಬಳಿ ಪ್ರಬಲ ಸ್ಪೋಟ ಸಂಭವಿಸಿರುವ ಬೆನ್ನಲ್ಲೇ ದೇಶದ ಹಲವೆಡೆ ಸಿಆರ್ ಪಿಎಫ್ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ರವಾನಿಸಿರುವ ಬಗ್ಗೆ ವರದಿಯಾಗಿದೆ.

ಬೆದರಿಕೆ ಕರೆಗಳು ಬಂದ ಸಿಆರ್ ಪಿಎಫ್ ಶಾಲೆಗಳ ಪೈಕಿ ಎರಡು ದೆಹಲಿಯಲ್ಲಿದೆ ಮತ್ತು ಒಂದು ಹೈದರಾಬಾದ್‌ ನಲ್ಲಿದೆ ಎಂದು ANI ವರದಿ ಮಾಡಿದೆ. ಸೋಮವಾರ ತಡರಾತ್ರಿ ಈ ಶಾಲೆಗಳಿಗೆ ಈ-ಮೇಲ್ ಮೂಲಕ ಬೆದರಿಕೆಯನ್ನು ರವಾನಿಸಲಾಗಿದೆ ಎಂದು ವರದಿಯಾಗಿದೆ.

ದಿಲ್ಲಿಯ ರೋಹಿಣಿಯಲ್ಲಿರುವ ಸಿಆರ್ ಪಿಎಫ್ (CRPF )ಶಾಲೆಯೊಂದರ ಬಳಿ ರವಿವಾರ ಸ್ಪೋಟ ಸಂಭವಿಸಿತ್ತು. ಘಟನೆಯಲ್ಲಿ ಶಾಲೆಯ ಗೋಡೆಗೆ ಹಾನಿಯಾಗಿದೆ ಮತ್ತು ಸ್ಫೋಟದ ರಭಸಕ್ಕೆ ಶಾಲೆ ಬಳಿ ನಿಲ್ಲಿಸಿದ್ದ ಕಾರಿನ ಕಿಟಕಿ ಗಾಜುಗಳು ಒಡೆದು ಹೋಗಿವೆ ಮತ್ತು ಆ ಪ್ರದೇಶದಲ್ಲಿನ ಅಂಗಡಿಗಳ ಸೂಚನಾ ಫಲಕಗಳಿಗೆ ಹಾನಿಯಾಗಿದೆ. ಸ್ಪೋಟಕ್ಕೆ ಸಂಬಂಧಿಸಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳ ಕೈವಾಡದ ಬಗ್ಗೆ ದಿಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News