×
Ad

ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆ ಅತ್ಯಗತ್ಯ ಶಾಸನ: ಕಾರ್ಪೊರೇಟ್ ರಂಗ

Update: 2023-08-03 23:43 IST

ಹೊಸದಿಲ್ಲಿ: ಪ್ರತಿಪಕ್ಷಗಳ ಆಕ್ಷೇಪಗಳ ನಡುವೆಯೇ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆ,2023 (ಡಿಪಿಡಿಪಿ) ಅನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ.

ನೂತನ ಮಸೂದೆಯು ಗೋಪ್ಯತೆಗೆ ಸಂಬಂಧಿಸಿದಂತೆ ಕಾನೂನನ್ನು ರಚಿಸುವ ಕೇಂದ್ರ ಸರಕಾರದ ಎರಡನೇ ಪ್ರಯತ್ನವಾಗಿದೆ. ವ್ಯಕ್ತಿಗೆ ತನ್ನ ಡೇಟಾ ರಕ್ಷಣೆಯ ಹಕ್ಕನ್ನು ಖಚಿತಪಡಿಸುವುದರೊಂದಿಗೆ ವೈಯಕ್ತಿಕ ದತ್ತಾಂಶಗಳ ಸಂಸ್ಕರಣೆಯನ್ನು ನಿಯಂತ್ರಿಸುವುದು ಮಸೂದೆಯ ಮುಖ್ಯ ಉದ್ದೇಶವಾಗಿದೆ.

ನೂತನ ಮಸೂದೆಯನ್ನು ಭಾರತದ ಕಾರ್ಪೊರೇಟ್ ರಂಗ (ಇಂಡಿಯಾ ಇಂಕ್)ವು ಸ್ವಾಗತಿಸಿದೆ. ಭಾರತವು ತಂತ್ರಜ್ಞಾನದಿಂದ ಪ್ರಭಾವಿತ ದಶಕದಲ್ಲಿ ಹೆಜ್ಜೆಯಿರಿಸುವಲ್ಲಿ ಇದು ಗಮನಾರ್ಹ ಹೆಜ್ಜೆಯಾಗಿದೆ ಎಂದು ಹಲವರು ಪ್ರಶಂಸಿಸಿದ್ದಾರೆ. ಡೇಟಾ ಸಂರಕ್ಷಣೆಗೆ ಸಂಬಂಧಿಸಿದಂತೆ ನೂತನ ಮಸೂದೆಯು ಹೊಸ ಅಂತರರಾಷ್ಟ್ರೀಯ ಪೂರ್ವನಿದರ್ಶನವನ್ನು ಸ್ಥಾಪಿಸಲಿದೆ ಎಂದು ಹೆಚ್ಚಿನ ಕಾರ್ಪೊರೇಟ್ ನಾಯಕರು ಭಾವಿಸಿದ್ದಾರೆ.

ಇದು ದೇಶವು ಕಳೆದ ಕೆಲವು ವರ್ಷಗಳಿಂದ ಕಾಯುತ್ತಿದ್ದ ಘಳಿಗೆಯಾಗಿದೆ ಎಂದು ಹೇಳಿದ ಡೆಲಾಯ್ಟ್ ಇಂಡಿಯಾದ ಪಾಲುದಾರ ಮನೀಷ ಸೆಹಗಲ್ ಅವರು,ಮಸೂದೆಯು ಜಾರಿಗೊಂಡರೆ ವ್ಯಕ್ತಿಗಳು ತಮ್ಮ ವೈಯಕ್ತಿಕ (ಡಿಜಿಟಲ್) ಡೇಟಾವನ್ನು ನಿಯಂತ್ರಿಸುವುದನ್ನು ಸಾಧ್ಯವಾಗಿಸುತ್ತದೆ ಮತ್ತು ಉದ್ಯಮಗಳು ವ್ಯಕ್ತಿಗಳ ವೈಯಕ್ತಿಕ ದತ್ತಾಂಶಗಳನ್ನು ಕಾನೂನುಬದ್ಧವಾಗಿ ಸಂಸ್ಕರಿಸುವಂತೆ ಮಾಡುತ್ತದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News