ಮುಸ್ಲಿಮರ ಓಲೈಕೆ ಕುರಿತ ಬಿಜೆಪಿಯ ಆಕ್ಷೇಪಾರ್ಹ ಪೋಸ್ಟ್ ತೆಗೆದುಹಾಕುವಂತೆ ʼXʼಗೆ ಆದೇಶ ನೀಡಿದ ಚುನಾವಣಾ ಆಯೋಗ

Update: 2024-05-07 13:06 GMT

PC : X | @BJP4Karnataka

ಹೊಸದಿಲ್ಲಿ : ಭಾರತೀಯ ಚುನಾವಣಾ ಆಯೋಗವು ʼBJP4Karnatakaʼ ಹ್ಯಾಂಡಲ್‌ನಿಂದ ಮುಸ್ಲಿಮರ ಓಲೈಕೆ ಕುರಿತು ಮಾಡಿದ ಆಕ್ಷೇಪಾರ್ಹ ಪೋಸ್ಟ್ ಅನ್ನು ತಕ್ಷಣವೇ ತೆಗೆದುಹಾಕುವಂತೆ ಸಾಮಾಜಿಕ ಮಾಧ್ಯಮ ವೇದಿಕೆ 'X' ಆದೇಶ ನೀಡಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಾಮಾಜಿಕ ಜಾಲತಾಣ X ನ ನೋಡಲ್ ಅಧಿಕಾರಿಗೆ ಬರೆದ ಪತ್ರದಲ್ಲಿ ಚುನಾವಣಾ ಆಯೋಗವು, ಆಕ್ಷೇಪಾರ್ಹ ಪೋಸ್ಟ್ ನ ಲಿಂಕ್ ಅನ್ನು ಉಲ್ಲೇಖಿಸಿ ಅದನ್ನು ಕೂಡಲೇ ತೆಗೆದು ಹಾಕುವಂತೆ ಆದೇಶ ನೀಡಿದೆ. "BJP4Karnataka" ಖಾತೆಯಿಂದ ಮಾಡಿದ ಪೋಸ್ಟ್ ಕಾನೂನು ಚೌಕಟ್ಟನ್ನು ಉಲ್ಲಂಘಿಸಿದೆ. ಈ ಪ್ರಕರಣದಲ್ಲಿ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 79(3)(ಬಿ) ಮತ್ತು ನಿಯಮ 3 ರ ಪ್ರಕಾರ ಆಕ್ಷೇಪಾರ್ಹ ಪೋಸ್ಟ್ ತೆಗೆದುಹಾಕಲು ಮೇ 5 ರಂದೇ ಬೆಂಗಳೂರಿನ ಸೈಬರ್ ಕ್ರೈಂ ವಿಭಾಗದ ಮೂಲಕ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು X ಗೆ ನಿರ್ದೇಶನ ನೀಡಿದ್ದಾರೆ .ಆದರೂ ಪೋಸ್ಟ್ ಅನ್ನು ಇನ್ನೂ ತೆಗೆದುಹಾಕಲಾಗಿಲ್ಲ ಎಂದು ತಿಳಿಸಿದೆ.

Photo : @X/ANI

 ಕೂಡಲೇ ಈ ಕ್ರಮ ಕೈಗೊಂಡು, ಆಕ್ಷೇಪಾರ್ಹ ಪೋಸ್ಟನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಭಾರತೀಯ ಚುನಾವಣಾ ಆಯೋಗದ ಜಂಟಿ ನಿರ್ದೇಶಕ ಮತ್ತು ನೋಡಲ್ ಅಧಿಕಾರಿ ಅನುಜ್ ಚಂದಕ್ ಅವರು X ನ ನೋಡಲ್ ಅಧಿಕಾರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಆದರೆ ಚುನಾವಣಾ ಆಯೋಗವು ಎಲ್ಲಿಯೂ ಬಿಜೆಪಿಗೆ ತನ್ನ ಪೋಸ್ಟ್‌ ಡಿಲೀಟ್‌ ಮಾಡುವಂತೆ ಅಥವಾ ತೆಗೆದು ಹಾಕುವಂತೆ ಹೇಳಿಲ್ಲ. ಬದಲಾಗಿ ಸಾಮಾಜಿಕ ಜಾಲತಾಣ ಎಕ್ಸ್‌ ಗೆ ಆದೇಶ ನೀಡಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News