×
Ad

ಎಎಪಿ ಮುಗಿಸಲು ಬಿಜೆಪಿ ಹುನ್ನಾರ: ಕೇಜ್ರಿವಾಲ್ ಆರೋಪ

Update: 2024-05-19 13:48 IST

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ | PC : PTI

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಇಚ್ಛೆಯಂತೆ ಯಾರನ್ನು ಬೇಕಾದರೂ ಜೈಲಿಗೆ ಕಳುಹಿಸಬಹುದು ಎಂದು ಬಿಜೆಪಿ ಕೇಂದ್ರ ಕಚೇರಿಗೆ ಜಾಥಾ ನಡೆಸಲು ಉದ್ದೇಶಿಸಿರುವ ಆಮ್ ಆದ್ಮಿ ಪಕ್ಷದ ಮುಖಂಡರು ಘೋಷಿಸಿದರು. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಇತರ ಹಲವು ಮಂದಿ ಮುಖಂಡರು ಈ ಬಗ್ಗೆ ಹೇಳಿಕೆ ನೀಡಿ, "ಪಕ್ಷವನ್ನು ಮುಗಿಸಲು ಮೋದಿ ಆಪರೇಷನ್ ಜಾದೂ ನಡೆಸುತ್ತಿದ್ದಾರೆ" ಎಂದು ಆಪಾದಿಸಿದರು.

"ಪ್ರಮುಖ ‌ಆಪ್ ನಾಯಕರನ್ನು ಬಂಧಿಸುವುದು, ಪಕ್ಷದ ಬ್ಯಾಂಕ್ ಖಾತೆಗಳನ್ನು ಅಮಾನತುಗೊಳಿಸುವುದು ಹಾಗೂ ಕಚೇರಿಗಳನ್ನು ಮುಚ್ಚುವ ಮೂಲಕ ಆಮ್ ಆದ್ಮಿ ಪಕ್ಷವನ್ನು ಹೊಸಕಿ ಹಾಕಲು ಪ್ರಧಾನಿ ನರೇಂದ್ರ ಮೋದಿ ಮಾನಸಿಕವಾಗಿ ಸಜ್ಜಾಗಿದ್ದಾರೆ ಎಂದು ಕೇಜ್ರಿವಾಲ್ ದೂರಿದರು.

ನಾನು ಜಾಮೀನು ಪಡೆದ ದಿನದಿಂದಲೂ ಅವರು ಆಪರೇಷನ್ ಜಾದೂ ನಡೆಸುತ್ತಿದ್ದಾರೆ. ಮೋದಿಯವರು ಎಎಪಿ ಬಗ್ಗೆ ಮಾತನಾಡುವುದು ನಿಲ್ಲಿಸಿಲ್ಲ. ಇಡೀ ದೇಶ ಅವರ ಕೆಲಸದ ಬಗ್ಗೆ ಮಾತನಾಡುತ್ತಿದೆ ಹಾಗೂ ಈ ಪಕ್ಷ ಬಿಜೆಪಿಗೆ ಅಪಾಯಕಾರಿ. ಅದ್ದರಿಂದ ಪಕ್ಷವನ್ನೇ ನಿಭಾಯಿಸಲು ಇದೇ ಸಂದರ್ಭ ಎಂದು ಕಾಯುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News