×
Ad

ಮಂಡಿ ಕ್ಷೇತ್ರದಿಂದ ಗೆದ್ದರೆ ಬಾಲಿವುಡ್‍ಗೆ ಗುಡ್‍ಬೈ: ಕಂಗಾನಾ ರಣಾವತ್

Update: 2024-05-19 12:35 IST

ಕಂಗಾನಾ ರಣಾವತ್ (PTI)

ಶಿಮ್ಲಾ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಬಾಲಿವುಡ್ ನಟಿ ಕಂಗಾನಾ ರಣಾವತ್, "ಈ ಬಾರಿ ಮಂಡಿ ಕ್ಷೇತ್ರದಿಂದ ಗೆದ್ದರೆ ಬಾಲಿವುಡ್‍ಗೆ ಗುಡ್‍ಬೈ ಹೇಳುತ್ತೇನೆ" ಎಂದು ಪ್ರಕಟಿಸಿದ್ದಾರೆ.

ಮಂಗಳವಾರ ನಾಮಪತ್ರ ಸಲ್ಲಿಸಿರುವ ಅವರು ತಮ್ಮ ತವರು ಜಿಲ್ಲೆಯಿಂದ ಸ್ಪರ್ಧಿಸುತ್ತಿದ್ದು, ಪ್ರಚಾರಕ್ಕಾಗಿ ಎಲ್ಲ ಸಮಯವನ್ನು ಮೀಸಲಿಟ್ಟಿದ್ದೇನೆ ಎಂದು ಹೇಳಿದ್ದಾರೆ.

ಆಜ್‍ತಕ್‍ಗೆ ನೀಡಿರುವ ಸಂದರ್ಶನದಲ್ಲಿ, "ಮಂಡಿ ಕ್ಷೇತ್ರದಿಂದ ಆಯ್ಕೆಯಾದಲ್ಲಿ ನನ್ನ ಹೊಣೆಗಾರಿಕೆಯನ್ನು ಈಡೇರಿಸಿದ ಬಳಿಕ ನಿಧಾನವಾಗಿ ಚಿತ್ರೋದ್ಯಮ ತೊರೆಯುತ್ತೇನೆ" ಎಂದು ಹೇಳಿದ್ದಾರೆ.

ಇತ್ತೀಚೆಗೆ ತಮ್ಮ ಆಸ್ತಿವಿವರಗಳನ್ನು ಅವರು ಘೋಷಿಸಿದ್ದಾರೆ. ಆಭರಣ, ಕಾರು, ಸ್ಥಿರಾಸ್ತಿ ಸೇರಿದಂತೆ 91 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಹೊಂದಿರುವ ಅವರು, 17 ಕೋಟಿ ರೂಪಾಯಿ ಸಾಲ ಹೊಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News