×
Ad

ಕೆನಡಾಕ್ಕೆ ಕೆಲವು ವೀಸಾ ಸೇವೆಗಳ ಪುನರಾರಂಭಿಸಿದ ಭಾರತ

Update: 2023-10-25 23:15 IST

ಸಂಧಾರ್ಬಿಕಾ ಚಿತ್ರ | Photo: PTI

ಹೊಸದಿಲ್ಲಿ : ರಾಜತಾಂತ್ರಿಕ ವಿವಾದದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಕೆನಡಾಕ್ಕೆ ರದ್ದುಪಡಿಸಲಾಗಿದ್ದ ವೀಸಾ ಸೇವೆಗಳನ್ನು ಗುರುವಾರದಿಂದ ಭಾರತ ಪುನರಾರಂಭಿಸಲಿದೆ ಎಂದು ಒಟ್ಟೊವಾದಲ್ಲಿರುವ ಭಾರತೀಯ ಹೈಕಮಿಷನ್ ಬುಧವಾರ ತಿಳಿಸಿದೆ.

ಪ್ರವೇಶ ವೀಸಾ, ಉದ್ಯಮ ವೀಸಾ, ವೈದ್ಯಕೀಯ ವೀಸಾ ಹಾಗೂ ಕಾನ್ಫರೆನ್ಸ್ ವೀಸಾ ಸೇವೆಗಳು ಪುನಾರಂಭವಾಗಲಿದೆ ಎಂದು ಹೈ ಕಮಿಷನ್ ತಿಳಿಸಿದೆ.

ಮುಂದಿನ ನಿರ್ಧಾರಗಳನ್ನು ಪರಿಸ್ಥಿತಿಯ ನಿರಂತರ ಮೌಲ್ಯ ಮಾಪನದ ಆಧಾರದಲ್ಲಿ ತೆಗೆದುಕೊಳ್ಳಲಾಗುವುದು ಎಂದು ಹೈಕಮಿಷನ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News