ರೂಪಾಯಿ ಕುಸಿತದಿಂದ ಚಿನ್ನದ ಬೆಲೆಯ ಮೇಲೆ ಪರಿಣಾಮ!
ಮಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟು?
ಸಾಂದರ್ಭಿಕ ಚಿತ್ರ (AI)
ಚಿನ್ನ ಮತ್ತು ಬೆಳ್ಳಿಯ ಆಮದುದಾರ ರಾಷ್ಟ್ರಗಳಲ್ಲಿ ಭಾರತ ಅತಿದೊಡ್ಡ ಸ್ಥಾನ ಪಡೆದಿದೆ. ರೂಪಾಯಿ ಕುಸಿತದಿಂದ ಗರಿಷ್ಠ ಮದುವೆ ಋತುವಿನಲ್ಲಿ ಗ್ರಾಹಕರ ಚಿನ್ನದ ಬೇಡಿಕೆ ಕುಗ್ಗಿಸುತ್ತದೆ ಮತ್ತು ಆಭರಣ ರಫ್ತಿನ ಮೇಲೆ ಪರಿಣಾಮ ಬೀರುತ್ತದೆ.
ಕಳೆದ ಬುಧವಾರ ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ನಿರ್ಣಾಯವೆನಿಸಿದ ರೂ. 90ರ ಗಡಿಯನ್ನು ದಾಟಿದೆ. ರೂಪಾಯಿಯ ದುರ್ಬಲ ನಿರ್ವಹಣೆ ಚಿನ್ನದ ಬೆಲೆಯ ಮೇಲೂ ಪರಿಣಾಮ ಬೀರುತ್ತಿದೆ.
ರೂಪಾಯಿ ಈಗ ಏಷ್ಯಾದಲ್ಲಿಯೇ ಅತ್ಯಂತ ಕಳಪೆ ಪ್ರದರ್ಶನ ನೀಡುವ ಕರೆನ್ಸಿಯಾಗಿದೆ. ಈ ತೀವ್ರ ಅಪಮೌಲ್ಯವು ನಿರಂತರ ವಿದೇಶಿ ಬಂಡವಾಳ ಹೊರಹರಿವುದು, ದಾಖಲೆಯ ವ್ಯಾಪಾರದ ಕೊರತೆ ಮತ್ತು ಸ್ಥಗಿತಗೊಂಡ ಭಾರತ- ಅಮೆರಿಕ ವ್ಯಾಪಾರ ಮಾರುಕತೆಗಳಿಂದ ಹೆಚ್ಚುತ್ತಿರುವ ಒತ್ತಡದ ಪರಿಣಾಮವಾಗಿದೆ. ಈ ದುರ್ಬಲ ಪ್ರದರ್ಶನ ಚಿನ್ನ ಸೇರಿದಂತೆ ಇತರ ಆಮದು ಮಾಡಿಕೊಳ್ಳುವ ಸರಕುಗಳ ಮೇಲೂ ಪರಿಣಾಮ ಬೀರುತ್ತಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟು?
ಗುರುವಾರ ಮಂಗಳೂರಿನಲ್ಲಿ ಹತ್ತು ಗ್ರಾಂ ಬಂಗಾರದ ಬೆಲೆ ಶನಿವಾರ ಮತ್ತೆ ಇಳಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ರೂ. 13,015 (-54), 22 ಕ್ಯಾರೆಟ್ ಚಿನ್ನಕ್ಕೆ ರೂ. 11,930 (-50) ಮತ್ತು 18 ಕ್ಯಾರೆಟ್ ಚಿನ್ನಕ್ಕೆ ರೂ. 9,761 (- 41) ಬೆಲೆಗೆ ಕುಸಿದಿದೆ.
ಚಿನ್ನದ ಬೆಲೆ ಇಳಿಕೆ
ದೇಶೀಯ ಮಾರುಕಟ್ಟೆಯಲ್ಲಿ ವೇಗವಾಗಿ ಸಾಗಿದ್ದ ಚಿನ್ನದ ಬೆಲೆಗೆ ಬ್ರೇಕ್ ಬಿದ್ದಿದೆ. ಕಳೆದ ಕೆಲವು ವಹಿವಾಟುಗಳಲ್ಲಿ ನಿರಂತರ ಏರಿಳಿತ ಸಾಧಿಸಿರುವ ಬಂಗಾರವು ಶನಿವಾರ ಇಳಿಕೆಯತ್ತ ಮುಖಮಾಡಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಮಾತ್ರ ಈ ಇಳಿಕೆ ಕಂಡುಬಂದಿಲ್ಲ. ಡಿಸೆಂಬರ್ 6ರಂದು ಬೆಳ್ಳಿ ಕೆಜಿಗೆ ರೂ 3000 ದುಬಾರಿಯಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ಇಳಿಕೆ
ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಳೆದ ವಹಿವಾಟಿನಲ್ಲಿ ಜಿಗಿತದ ಬಳಿಕ ವೀಕೆಂಡ್‌ನಲ್ಲಿ ಬೆಲೆ ತಗ್ಗಿದೆ. ಶುಕ್ರವಾರ ಬೆಲೆ ಹೆಚ್ಚಾಗಿದ್ದ ಬಂಗಾರ ಶನಿವಾರ 10 ಗ್ರಾಮ್ ಗೆ 500 ರೂಪಾಯಿಗೂ ಅಧಿಕ ಇಳಿಕೆಯಾಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಕೆಜಿಗೆ 3,000 ರೂಪಾಯಿನಷ್ಟು ಏರಿಕೆ ಕಾಣಬಹುದಾಗಿದೆ.
ದುರ್ಬಲ ರೂಪಾಯಿಯ ಪರಿಣಾಮ
ಜಾಗತಿಕ ಬೆಲೆಗಳು ಸ್ಥಿರವಾಗಿದ್ದರೂ ದುರ್ಬಲ ರೂಪಾಯಿ ಆಮದುಗಳನ್ನು ದುಬಾರಿಯನ್ನಾಗಿ ಮಾಡುತ್ತದೆ ಇದರಿಂದ ದೇಶಿ ಸರಕುಗಳ ಬೆಲೆಗಳ ಮೇಲೆ ಒತ್ತಡ ಉಂಟಾಗುತ್ತದೆ. ಭಾರತದ ಆಮದು ಶುಲ್ಕದ ಮೇಲೆ ಗಣನೀಯ ಪರಿಣಾಮ ಬೀರುವ ಕಚ್ಚಾ ತೈಲ ಏರಿಕೆಗೆ ಕಾರಣವಾಗಿ ವ್ಯಾಪಕ ಹಣದುಬ್ಬರದ ಪರಿಣಾಮಗಳಿಗೆ ಕಾರಣವಾಗಬಹುದು.
ಚಿನ್ನ ಮತ್ತು ಬೆಳ್ಳಿಯ ಆಮದುದಾರ ರಾಷ್ಟ್ರಗಳಲ್ಲಿ ಭಾರತ ಅತಿದೊಡ್ಡ ಸ್ಥಾನ ಪಡೆದಿದೆ. ಗರಿಷ್ಠ ಮದುವೆ ಋತುವಿನಲ್ಲಿ ಗ್ರಾಹಕರ ಬೇಡಿಕೆ ಕುಗ್ಗಿಸುತ್ತದೆ ಮತ್ತು ಆಭರಣ ರಫ್ತಿನ ಮೇಲೆ ಪರಿಣಾಮ ಬೀರುತ್ತದೆ. ಈ ವಾರವಿಡೀ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡಿದೆ.