×
Ad

ಸಂತ್ರಸ್ತ ಪ್ರಯಾಣಿಕರಿಗೆ 10,000 ರೂ. ಪ್ರಯಾಣ ವೋಚರ್: ಇಂಡಿಗೊ ಘೋಷಣೆ

Update: 2025-12-11 21:20 IST

ಇಂಡಿಗೊ | Photo Credit : PTI 

ಹೊಸದಿಲ್ಲಿ, ಡಿ. 11: ಡಿಸೆಂಬರ್ 3 ಮತ್ತು 4ರ ನಡುವಿನ ಅವಧಿಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿಹಾಕಿಕೊಂಡ ಪ್ರಯಾಣಿಕರಿಗೆ ಇಂಡಿಗೊ ಏರ್‌ಲೈನ್ಸ್ 10,000 ರೂ. ಮೌಲ್ಯದ ಪ್ರಯಾಣ ವೋಚರ್ ಗಳನ್ನು ನೀಡಲಿದೆ ಎಂದು ವಿಮಾನಯಾನ ಕಂಪೆನಿಯು ಗುರುವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ವೋಚರ್ 12 ತಿಂಗಳುಗಳ ವಾಯಿದೆ ಹೊಂದಿರುತ್ತವೆ.

‘‘2025 ಡಿಸೆಂಬರ್ 3, 4 ಮತ್ತು 5ರಂದು ಪ್ರಯಾಣ ಮಾಡಬೇಕಾಗಿದ್ದ ನಮ್ಮ ಗ್ರಾಹಕರ ಪೈಕಿ ಹಲವರು ವಿವಿಧ ವಿಮಾನ ನಿಲ್ದಾಣಗಳಲ್ಲಿ ಹಲವು ತಾಸುಗಳವರೆಗೆ ಸಿಕ್ಕಿಹಾಕಿಕೊಂಡಿರುವುದನ್ನು ಇಂಡಿಗೊ ವಿಷಾದಪೂರ್ವಕವಾಗಿ ಒಪ್ಪಿಕೊಳ್ಳುತ್ತದೆ. ಅವರ ಪೈಕಿ ಹೆಚ್ಚಿನವರು ಜನಜಂಗುಳಿಯಿಂದಾಗಿ ತೀವ್ರ ಸಂಕಷ್ಟಕ್ಕೊಳಗಾದರು. ಇಂಥ ತೀವ್ರ ಸಂಕಷ್ಟಕ್ಕೊಳಗಾಗಿರುವ ಪ್ರಯಾಣಿಕರಿಗೆ ನಾವು 10,000 ರೂ. ಮೌಲ್ಯದ ಪ್ರಯಾಣ ವೋಚರ್ ಗಳನ್ನು ನೀಡುತ್ತಿದ್ದೇವೆ. ಈ ವೋಚರ್ ಗಳನ್ನು ಮುಂದಿನ 12 ತಿಂಗಳುಗಳ ಅವಧಿಯಲ್ಲಿ ಇಂಡಿಗೊ ವಿಮಾನಗಳಲ್ಲಿ ಪ್ರಯಾಣಿಸಲು ಬಳಸಿಕೊಳ್ಳಬಹುದಾಗಿದೆ’’ ಎಂದು ವಿಮಾನಯಾನ ಕಂಪೆನಿ ತಿಳಿಸಿದೆ.

ಈ ವೋಚರ್ ಗಳು ವಿಮಾನ ಟಿಕೆಟ್‌ ಗಳ ದರ ಮರುಪಾವತಿ ಮತ್ತು ಸರಕಾರದ ಆದೇಶದಂತೆ ನೀಡಲಾಗುತ್ತಿರುವ ರೂ. 5,000- 10,000 ಪರಿಹಾರಕ್ಕೆ ಹೆಚ್ಚುವರಿಯಾಗಿದೆ ಎಂದು ಅದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News