×
Ad

ಭಯೋತ್ಪಾದಕರ ಶಿಬಿರಗಳು ಎಷ್ಟೇ ದೂರದಲ್ಲಿದ್ದರೂ ದಾಳಿ ಮಾಡಲು ಭಾರತ ಹಿಂಜರಿಯುವುದಿಲ್ಲ: ಪಾಕ್‌ಗೆ ಜೈಶಂಕರ್ ಎಚ್ಚರಿಕೆ

Update: 2025-06-10 20:03 IST

 ಜೈಶಂಕರ್ | PTI 

ಹೊಸದಿಲ್ಲಿ: ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ತರಬೇತಿ ಶಿಬಿರಗಳು ಎಷ್ಟೇ ದೂರದಲ್ಲಿದ್ದರೂ ದಾಳಿ ಮಾಡಲು ಭಾರತ ಹಿಂಜರಿಯುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸೋಮವಾರ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಯುರೋಪಿಯನ್ ಒಕ್ಕೂಟದ ಜೊತೆಗೆ ಉನ್ನತ ಮಟ್ಟದ ಮಾತುಕತೆ ನಡೆಸಲು ಬ್ರಸೆಲ್ಸ್‌ಗೆ ಭೇಟಿ ನೀಡಿರುವ ಸಂದರ್ಭದಲ್ಲಿ ‘ಪೊಲಿಟಿಕೊ’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಜೈಶಂಕರ್ ಈ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನ ಭಯೋತ್ಪಾದನೆಯನ್ನು ಸರಕಾರಿ ನೀತಿಯನ್ನಾಗಿ ಬಳಸುವುದರಲ್ಲಿ ಅತ್ಯಂತ ಪರಿಣತಿಯನ್ನು ಪಡೆದ ದೇಶವಾಗಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ ನಡೆದ ‘ಆಪರೇಶನ್ ಸಿಂಧೂರ’ ಸೇನಾ ಕಾರ್ಯಾಚರಣೆಯ ವೇಳೆ ಭಾರತದ ಯುದ್ಧ ವಿಮಾನಗಳು ಮತ್ತು ಕ್ಷಿಪಣಿಗಳು ಪಾಕಿಸ್ತಾನದ ವಾಯು ಪಡೆಗೆ ವ್ಯಾಪಕ ಹಾನಿ ಮಾಡಿದೆ ಎಂದು ಹೇಳಿದ ಅವರು ಆ ಹೊಡೆತವನ್ನು ತಾಳಲಾರದೆ ಅದು ಶಾಂತಿಯ ಮೊರೆಹೋಯಿತು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News