×
Ad

ಗ್ಯಾಸ್ ಚೇಂಬರ್ ಗೆ ಪ್ರವೇಶಿಸಿದಂತಾಗಿದೆ: ದಿಲ್ಲಿ ವಾಯುಮಾಲಿನ್ಯ ಕುರಿತು ಪ್ರಿಯಾಂಕಾ ಗಾಂಧಿ

Update: 2024-11-14 14:53 IST

ಪ್ರಿಯಾಂಕಾ ಗಾಂಧಿ ವಾದ್ರಾ (Photo: PTI)

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಗೆ ಮರಳಿದ್ದು, ಗ್ಯಾಸ್ ಚೇಂಬರ್ ಅನ್ನು ಪ್ರವೇಶಿಸಿದಂತಾಗಿದೆ ಎಂದು ವಯನಾಡ್ ಲೋಕಸಭಾ ಉಪ ಚುನಾವಣೆಯಲ್ಲಿನ ಸ್ಪರ್ಧೆಯ ನಂತರ ದಿಲ್ಲಿಗೆ ಮರಳಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅಸಮಾಧಾನ ವ್ಯಕ್ತಪಡಿಸಿದ್ದು, ನಾವೆಲ್ಲರೂ ಒಟ್ಟಾಗಿ ಕೂತು, ಶುಭ್ರ ಗಾಳಿಗೆ ಪರಿಹಾರವನ್ನು ಹುಡುಕಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಪ್ರತಿ ವರ್ಷವೂ ದಿಲ್ಲಿಯ ಮಾಲಿನ್ಯವು ಹದಗೆಡುತ್ತಲೇ ಸಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ, “ಸುಂದರವಾದ ಗಾಳಿ ಹಾಗೂ 35ರಷ್ಟು ವಾಯು ಗುಣಮಟ್ಟ ಸೂಚ್ಯಂಕ ಹೊಂದಿರುವ ವಯನಾಡ್ ನಿಂದ ದಿಲ್ಲಿಗೆ ಮರಳಿದಾಗ, ಗ್ಯಾಸ್ ಚೇಂಬರ್ ಅನ್ನು ಪ್ರವೇಶಿಸಿದಂತಾಯಿತು. ದಟ್ಟವಾಗಿ ಆವರಿಸಿಕೊಂಡಿರುವ ಹೊಗೆ, ಆಗಸದಿಂದ ನೋಡಿದಾಗ ಮತ್ತಷ್ಟು ಆಘಾತವಾಯಿತು” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

“ದಿಲ್ಲಿಯ ವಾಯು ಮಾಲಿನ್ಯವು ಪ್ರತಿ ವರ್ಷವೂ ಹದಗೆಡುತ್ತಲೇ ಸಾಗುತ್ತಿದೆ. ನಾವೆಲ್ಲರೂ ಒಟ್ಟಾಗಿ ಕುಳಿತು, ಶುಭ್ರ ಗಾಳಿಗೆ ಒಂದು ಪರಿಹಾರವನ್ನು ಹುಡುಕಲೇಬೇಕಿದೆ. ಇದು ಪಕ್ಷಾತೀತ ವಿಚಾರವಾಗಿದ್ದು, ಮಕ್ಕಳು, ವೃದ್ಧರು ಹಾಗೂ ಉಸಿರಾಟದ ತೊಂದರೆ ಇರುವವರು ಅಕ್ಷರಶಃ ಉಸಿರಾಡಲು ಅಸಾಧ್ಯವಾಗಿದೆ. ಈ ಸಮಸ್ಯೆ ಕುರಿತು ನಾವೇನಾದರೂ ಮಾಡಲೇಬೇಕಿದೆ” ಎಂದೂ ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ, ಬುಧವಾರ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮೂಲಕ ಪ್ರಿಯಾಂಕಾ ಗಾಂಧಿ ವಾದ್ರಾ ಚುನಾವಣಾ ರಾಜಕಾರಣಕ್ಕೆ ಪದಾರ್ಪಣೆ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News