×
Ad

ಡಿಜಿಟಲ್ ಅರೆಸ್ಟ್ | ಮಾಜಿ ನ್ಯಾಯಾಧೀಶರಿಗೆ ಒಂದು ಕೋಟಿ.ರೂ.ಗೂ ಅಧಿಕ ವಂಚನೆ

Update: 2026-03-09 20:02 IST

ಸಾಂದರ್ಭಿಕ ಚಿತ್ರ | Photo Credit : freepik

ಹೈದರಾಬಾದ್,ಮಾ.9: ಮಾಜಿ ಜಿಲ್ಲಾ ನ್ಯಾಯಾಧೀಶರೋರ್ವರು ಡಿಜಿಟಲ್ ಅರೆಸ್ಟ್ ವಂಚನೆಗೆ ಬಲಿಯಾಗಿ ಒಂದು ಕೋಟಿ ರೂ.ಗೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದರು.

69 ವರ್ಷದ ನಿವೃತ್ತ ನ್ಯಾಯಾಧೀಶರ ಮೊಬೈಲ್ ಫೋನ್ ಸಂಖ್ಯೆ ಮಹಿಳೆಯರ ಕಳ್ಳ ಸಾಗಣೆ ಮತ್ತು ಇತರ ಅಪರಾಧಗಳಲ್ಲಿ ಒಳಗೊಂಡಿದೆ ಎಂದು ಸೈಬರ್ ಕ್ರಿಮಿನಲ್‌ಗಳು ವಾರದ ಹಿಂದೆ ಅವರಿಗೆ ಬೆದರಿಸಿದ್ದರು.

ಇಲ್ಲಿಯ ಮಲ್ಕಾಜ್ಗಿರಿ ನಿವಾಸಿಯಾಗಿರುವ ಅವರು ಒಂದು ಕೋ.ರೂ.ಗೂ ಅಧಿಕ ಹಣವನ್ನು ವಂಚಕರಿಗೆ ವರ್ಗಾಯಿಸಿದ್ದರು. ತಾನು ವಂಚನೆಗೊಳಗಾಗಿದ್ದು ಗೊತ್ತಾದ ಬಳಿಕ ಮೂರು ದಿನಗಳ ಹಿಂದೆ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದು,ತನಿಖೆಯು ಪ್ರಗತಿಯಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News