×
Ad

ಮಧ್ಯಪ್ರದೇಶ | ಆ್ಯಂಬುಲೆನ್ಸ್‌ನಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ

Update: 2024-11-29 22:31 IST

ಸಾಂದರ್ಭಿಕ ಚಿತ್ರ


ಮಾವುಗಂಜ್(ಮಧ್ಯಪ್ರದೇಶ) : ಸಂಚರಿಸುತ್ತಿದ್ದ ಆ್ಯಂಬುಲೆನ್ಸ್‌ನಲ್ಲಿ ಹದಿನಾರು ವರ್ಷದ ಬಾಲಕಿಯ ಅತ್ಯಾಚಾರ ಎಸಗಿದ ಘಟನೆ ಮಾವುಗಂಜ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

108 ತುರ್ತು ಸೇವೆ ಅಡಿಯಲ್ಲಿ ಕಾಯಾರ್ಚರಿಸುತ್ತಿರುವ ಆ್ಯಂಬುಲೆನ್ಸ್‌ನಲ್ಲಿ ನವೆಂಬರ್ 22ರಂದು ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಚಾಲಕ ಸೇರಿದಂತೆ ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬಾಲಕಿಯ ಜೊತೆಗೆ ಆಕೆಯ ಸಹೋದರಿ ಹಾಗೂ ಭಾವ ಆ್ಯಂಬುಲೆನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದರು. (ಯಾರು ಕೂಡ ರೋಗಿಗಳಲ್ಲ). ಚಾಲಕ ವಿರೇಂದ್ರ ಚತುರ್ವೇದಿಯೊಂದಿಗೆ ಆತನ ಸಹಚರ ಕೇವತ್ ಇದ್ದ. ಬಾಲಕಿಯ ಸಹೋದರಿ ಹಾಗೂ ಭಾವನಿಗೆ ಚಾಲಕನ ಪರಿಚಯವಿತ್ತು ಎಂದು ಡಿಜಿಪಿ (ರೇವಾ ರೇಂಜ್) ಸಾಕೇತ್ ಪಾಂಡೆ ಗುರುವಾರ ತಿಳಿಸಿದ್ದಾರೆ.

ದಾರಿಯಲ್ಲಿ ಬಾಲಕಿಯ ಸಹೋದರಿ ಹಾಗೂ ಬಾವ ನೀರು ತೆರುವ ನೆಪದಲ್ಲಿ ಆ್ಯಂಬುಲೆನ್ಸ್‌ನಿಂದ ಇಳಿದರು. ಚಾಲಕ ವಿರೇಂದ್ರ ಚತುರ್ವೇದಿ ಆ್ಯಂಬುಲೆನ್ಸ್ ಅನ್ನು ವೇಗವಾಗಿ ಚಲಾಯಿಸಿಕೊಂಡು ಹೋದ. ಈ ಸಂದರ್ಭ ಆತನ ಸಹಚರ ಕೇವಾತ್ ಆ್ಯಂಬುಲೆನ್ಸ್ ಸನ್ಸಾನ್ ಗ್ರಾಮದಲ್ಲಿ ಚಲಿಸುತ್ತಿರುವಾಗ ಬಾಲಕಿಯ ಅತ್ಯಾಚಾರ ಎಸಗಿದ ಎಂದು ಅವರು ತಿಳಿಸಿದ್ದಾರೆ.

ಬಾಲಕಿಯನ್ನು ರಾತ್ರಿಯಿಡೀ ವಶದಲ್ಲಿ ಇರಿಸಿದ ಆರೋಪಿಗಳು ಮರುದಿನ ಆಕೆಯನ್ನು ರಸ್ತೆ ಬದಿಯಿಲ್ಲಿ ಎಸೆದು ತೆರಳಿದ್ದರು. ಮನೆಗೆ ತಲುಪಿದೆ ಬಾಲಕಿ ತನ್ನ ಮೇಲೆ ನಡೆದ ದೌರ್ಜನ್ಯದ ಕುರಿತು ತಾಯಿಗೆ ತಿಳಿಸಿದ್ದಾಳೆ. ಆರಂಭದಲ್ಲಿ ಆಕೆಯ ತಾಯಿ ಗೌರವಕ್ಕೆ ಅಂಜಿ ದೂರು ನೀಡಲು ಹಿಂಜರಿದಿದ್ದಾರೆ. ಆದರೆ, ಅನಂತರ ನವೆಂಬರ್‌ 25ರಂದು ಬಾಲಕಿ ಹಾಗೂ ಆಕೆಯ ತಾಯಿ ಪೊಲೀಸರನ್ನು ಸಂಪರ್ಕಿಸಿ ದೂರು ಸಲ್ಲಿಸಿದ್ದಾರೆ. ಅವರ ದೂರಿನ ಆಧಾರದಲ್ಲಿ ವಿರೇಂದ್ರ ಚತುರ್ವೇದಿ, ಕೇವಾತ್ ಹಾಗೂ ಬಾಲಕಿಯ ಸಹೋದರಿ, ಭಾವನ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ವಿರೇಂದ್ರ ಚತುರ್ವೇದಿ ಹಾಗೂ ಆತನ ಸಹಚರ ಕೇವಾತ್‌ನನ್ನು ಬುಧವಾರ ಬಂಧಿಸಲಾಗಿದೆ. ಬಾಲಕಿಯ ಸಹೋದರಿ ಹಾಗೂ ಭಾವನನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News