×
Ad

IndiGo ಬಿಕ್ಕಟ್ಟು; ವಿಮಾನ ಟಿಕೆಟ್ ದರಕ್ಕೆ ಮಿತಿ ಹೇರಿದ ಸರಕಾರ

Update: 2025-12-06 22:31 IST

Photo Credit : PTI 

ಹೊಸದಿಲ್ಲಿ, ಡಿ. 6: ಇಂಡಿಗೋ ವಿಮಾನಯಾನಗಳ ಅಗಾಧ ಅವ್ಯವಸ್ಥೆಯ ಹಿನ್ನೆಲೆಯಲ್ಲಿ, ತುರ್ತು ವಿಮಾನ ಪ್ರಯಾಣಕ್ಕೆ ಹೆಚ್ಚಾಗಿರುವ ಅಗಾಧ ಬೇಡಿಕೆಯನ್ನು ದುರುಪಯೋಗಪಡಿಸಿಕೊಂಡು ಇತರ ವಿಮಾನಯಾನ ಸಂಸ್ಥೆಗಳು ತಮ್ಮ ಟಿಕೆಟ್‌ ಗಳ ಬೆಲೆಯನ್ನು ಅಗಾಧ ಪ್ರಮಾಣದಲ್ಲಿ ಏರಿಸಿವೆ. ಇದನ್ನು ಗಮನಿಸಿರುವ ಸರಕಾರವು ಟಿಕೆಟ್‌ ಗಳ ಬೆಲೆ ನಿಯಂತ್ರಣಕ್ಕೆ ಶನಿವಾರ ಮಧ್ಯಪ್ರವೇಶಿಸಿದೆ.

ಕೆಲವು ವಿಮಾನಯಾನ ಸಂಸ್ಥೆಗಳು ತಮ್ಮ ನಿರ್ದಿಷ್ಟ ಮಾರ್ಗಗಳ ಪ್ರಯಾಣ ದರವನ್ನು ಐದರಿಂದ ಹತ್ತು ಪಟ್ಟು ಹೆಚ್ಚಿಸಿದ್ದವು.

ಈ ವಿಷಯವನ್ನು ಸರಕಾರವು ‘‘ಅತ್ಯಂತ ಗಂಭಿರ’’ವಾಗಿ ಪರಿಗಣಿಸಿದೆ ಹಾಗೂ ಎಲ್ಲಾ ಬಾಧಿತ ಮಾರ್ಗಗಳಲ್ಲಿ ವಿಮಾನ ಟಿಕೆಟ್‌ ಗಳಿಗೆ ನ್ಯಾಯಸಮ್ಮತ ಬೆಲೆಗಳನ್ನು ಖಾತರಿಪಡಿಸಲು ತನಗಿರುವ ವಿಶೇಷ ನಿಯಂತ್ರಣಾಧಿಕಾರಗಳನ್ನು ಚಲಾಯಿಸಿದೆ ಎಂದು ನಾಗರಿಕ ವಾಯುಯಾನ ಸಚಿವಾಲಯವು ಶನಿವಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಹೊಸದಾಗಿ ನಿಗದಿಪಡಿಸಲಾಗಿರುವ ಗರಿಷ್ಠ ದರ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಅಧಿಕೃತ ಸೂಚನೆಯೊಂದನ್ನು ನೀಡಲಾಗಿದೆ. ಪರಿಸ್ಥಿತಿಯು ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ನೂತನ ದರ ಮಿತಿ ಜಾರಿಯಲ್ಲಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News