×
Ad

ಮಹಾರಾಷ್ಟ್ರ: ʼನಾನು ಅಜಿತ್‌ ಪವಾರ್‌ ಬಣ ಪರವಿದ್ದೇನೆʼ ಎಂದ ಶಾಸಕಿ ಸರೋಜ್‌ ಅಹಿರೆ

Update: 2023-07-15 18:03 IST

ಶಾಸಕಿ ಸರೋಜ್‌ ಅಹಿರೆ Photo: PTI

ಮುಂಬೈ: ಮಹಾರಾಷ್ಟ್ರದ ರಾಜಕೀಯದ ಏರಿಳಿತಗಳೊಂದಿಗೆ ಸಾಗುತ್ತಿದೆ. ಇದೀಗ ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಪಕ್ಷದ ಶಾಸಕಿ ಸರೋಜ್‌ ಅಹಿರೆ ಅವರು ಈ ವರೆಗೆ ಯಾವುದೇ ಬಣಗಳ ಜೊತೆಗೆ ಗುರುತಿಸದೇ ಇದ್ದರೂ, ಇದೀಗ ತಾನು ಅಜಿತ್‌ ಪವಾರ್‌ ರಿಗೆ ಬೆಂಬಲ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದಾಗಿ ವರದಿಯಾಗಿದೆ.

ಸರೋಜ್‌ ರವರು ದಿಯೋಲಾಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಶುಕ್ರವಾರ ಹಣಕಾಸು ಮತ್ತು ಯೋಜನಾ ಸಚಿವಾಲಯಗಳನ್ನು ತಮ್ಮ ತೆಕ್ಕೆಗೆ ಪಡೆದ ಅಜಿತ್ ಪವಾರ್ ಅವರನ್ನು ಸ್ವಾಗತಿಸಲು ಸರೋಜ್‌ ಅಹಿರೆ ನಾಸಿಕ್ ರೈಲ್ವೆ ನಿಲ್ದಾಣದಲ್ಲಿ ಹಾಜರಿದ್ದರು.

“ಅಭಿವೃದ್ಧಿಗಾಗಿ ಅಧಿಕಾರದಲ್ಲಿ ಉಳಿಯುವುದು ಅವಶ್ಯಕ. ನಾನು ಅಜಿತ್ ದಾದಾ ಜೊತೆಗಿದ್ದೇನೆ. ಈ ಹಿಂದೆ ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿದ್ದರು. ಭವಿಷ್ಯದಲ್ಲಿಯೂ ಇದೇ ರೀತಿ ಮುಂದುವರಿಯುವಂತೆ ನಾನು ಅವರನ್ನು ವಿನಂತಿಸುತ್ತೇನೆ ಎಂದು ಅಹಿರೆ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪ ಹಾಗೂ ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ವಿರುದ್ಧ ಬಂಡಾಯವೆದ್ದರು ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿಯೊಂದಿಗೆ ಕೈಜೋಡಿಸಿದರು. ಅವರು ಮತ್ತು ಇತರ ಎಂಟು ಎನ್‌ಸಿಪಿ ನಾಯಕರು ಅದೇ ದಿನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News