×
Ad

ಸತತ ಏರು ಹಾದಿಯಲ್ಲಿರುವ ಚಿನ್ನ; ಇಂದಿನ ದರವೆಷ್ಟು?

Update: 2026-03-11 12:25 IST

ಸಾಂದರ್ಭಿಕ ಚಿತ್ರ (AI)

ತೈಲ ಬೆಲೆ ಏರಿಕೆಯಿಂದ ಜಾಗತಿಕವಾಗಿ ಮಾರುಕಟ್ಟೆಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಗಮನ ನೀಡಿದ್ದಾರೆ.

ಮಾರ್ಚ್ ಆರಂಭದಲ್ಲಿ ಏರಿಕೆಯಾದ ಶುದ್ಧ ಚಿನ್ನದ ಬೆಲೆ 17 ಸಾವಿರ ದಾಟಿತ್ತು. ಆದರೆ ನಂತರ ಕಳೆದ ಸೋಮವಾರದಿಂದ ಚಿನ್ನದ ಬೆಲೆ ಕುಸಿತದ ಹಾದಿಯಲ್ಲಿತ್ತು. ಸೋಮವಾರ ದಿಢೀರ್ ಕುಸಿತ ಕಂಡ ಚಿನ್ನದ ಬೆಲೆ ಗ್ರಾಂಗೆ 16,980 ರೂ.ಗೆ ಬಂದು ನಿಂತಿತ್ತು. ಮಂಗಳವಾರ ಮತ್ತೆ ತುಸು ಕುಸಿದಿದೆ. ಬುಧವಾರ ತೀವ್ರವಾಗಿ ಕುಸಿದ ನಂತರ ಗುರುವಾರ ಮತ್ತು ಶುಕ್ರವಾರವೂ ಬೆಲೆಯಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ಆದರೆ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಹಠಾತ್ ಏರಿಕೆ ಕಂಡುಬಂದಿತ್ತು. ಮಾರ್ಚ್ 09 ಸೋಮವಾರ ಮತ್ತೆ ಕುಸಿದ ಶುದ್ಧ ಚಿನ್ನದ ಬೆಲೆ 16 ಸಾವಿರದ ಮಿತಿಯೊಳಗೆ ನಿಂತಿತ್ತು. ಇದೀಗ ಮಂಗಳವಾರ ಮತ್ತು ಬುಧವಾರ ಚಿನ್ನದ ಬೆಲೆಯಲ್ಲಿ ಮತ್ತೆ ಸತತ ಏರಿಕೆಯಾಗಿದ್ದು, 16 ಸಾವಿರದ ಮಿತಿ ಮೀರಿ ಬೆಳೆದಿದೆ.

ಚಿನ್ನ-ಬೆಳ್ಳಿ ಬೆಲೆ ಏರಿಕೆಗೆ ಕಾರಣವೇನು?

ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕುಸಿದಿದ್ದವು. ಆದರೆ ಇದೀಗ ತೈಲ ಬೆಲೆ ಏರಿಕೆಯಿಂದ ಜಾಗತಿಕವಾಗಿ ಮಾರುಕಟ್ಟೆಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಗಮನ ನೀಡಿದ್ದಾರೆ.

ಇಂದಿನ ಚಿನ್ನದ ದರ ಹೇಗಿದೆ?

ಮಾರ್ಚ್ 11ರಂದು ಬುಧವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಮಂಗಳವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 93 ರೂ. ಏರಿಕೆ ಕಂಡು ಹತ್ತು ಗ್ರಾಂ ಬೆಲೆ 1,63,310 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 85 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,49,700 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 69 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,22,480 ರೂ. ಗೆ ತಲುಪಿದೆ.

ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?

ಮಾರ್ಚ್ 11ರಂದು ಬುಧವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಏರಿಕೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,331 (+93) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 14,970 (+85) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,248 (+69) ರೂ. ಬೆಲೆಗೆ ತಲುಪಿದೆ.

ಸ್ಥಿರವಾದ ಬೆಳ್ಳಿ ದರ

ಮಾರ್ಚ್ 02ರಂದು ಬೆಳ್ಳಿಯ ಬೆಲೆ ಗ್ರಾಂಗೆ 20 ರೂ. ಕುಸಿತ ಕಂಡು ಒಂದು ಕೆಜಿ ಬೆಳ್ಳಿ ಬೆಲೆಯು 2,95,000 ರೂ. ಗೆ ಬಂದು ನಿಂತಿತ್ತು. ಬುಧವಾರ ಮತ್ತೆ ಪ್ರತಿ ಗ್ರಾಂಗೆ 10 ರೂ. ಕುಸಿದ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,85,000 ರೂ. ಗೆ ತಲುಪಿತ್ತು. ನಂತರ ಗುರುವಾರ, ಶುಕ್ರವಾರ ಮತ್ತು ಶನಿವಾರ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ಸೋಮವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದ ಬೆಳ್ಳಿ ಪ್ರತಿ ಕೆಜಿಗೆ 2,80,000 ರೂ. ಗೆ ತಲುಪಿತ್ತು. ನಿನ್ನೆ ಮಂಗಳವಾರ ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,90,000 ರೂ.ಗೆ ತಲುಪಿದೆ. ಇಂದು ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿದೆ.

ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?

ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 16,346 (+93) ರೂ., 22 ಕ್ಯಾರೆಟ್ ಚಿನ್ನದ ದರ 14,985 (+85) ರೂ.

ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 16,336 (+93) ರೂ., 22 ಕ್ಯಾರೆಟ್ ಚಿನ್ನದ ದರ 14,975 (+85) ರೂ.

ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,495 (+77) ರೂ., 22 ಕ್ಯಾರೆಟ್ ಚಿನ್ನದ ದರ 15,120 (+70) ರೂ.

ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 16,331 (+93) ರೂ., 22 ಕ್ಯಾರೆಟ್ ಚಿನ್ನದ ದರ 14,970 (+85) ರೂ.

ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 16,331 (+93) ರೂ., 22 ಕ್ಯಾರೆಟ್ ಚಿನ್ನದ ದರ 14,970 (+85) ರೂ.

ಜೈಪುರ: 24 ಕ್ಯಾರೆಟ್ ಚಿನ್ನದ ದರ 16,346 (+93) ರೂ., 22 ಕ್ಯಾರೆಟ್ ಚಿನ್ನದ ದರ 14,985 (+85) ರೂ.

ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,346 (+93) ರೂ., 22 ಕ್ಯಾರೆಟ್ ಚಿನ್ನದ ದರ 14,985 (+85) ರೂ.

ಲಕ್ನೋ: 24 ಕ್ಯಾರೆಟ್ ಚಿನ್ನದ ದರ 16,346 (+93) ರೂ., 22 ಕ್ಯಾರೆಟ್ ಚಿನ್ನದ ದರ 14,985 (+85) ರೂ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News