×
Ad

ನ್ಯಾಶನಲ್ ಹೆರಾಲ್ಡ್ ಪ್ರಕರಣ | ಪುರಾವೆ ದೊರೆತಲ್ಲಿ ಕಾಂಗ್ರೆಸ್ ಪಕ್ಷವನ್ನು ಆರೋಪಿಯಾಗಿಸುವೆ: ಕೋರ್ಟ್‌ನಲ್ಲಿ ಈ.ಡಿ. ಹೇಳಿಕೆ

Update: 2025-07-02 21:17 IST

ಸೋನಿಯಾಗಾಂಧಿ,  ರಾಹುಲ್ ಗಾಂಧಿ | PTI

ಹೊಸದಿಲ್ಲಿ ಈಗ ಸ್ಥಗಿತಗೊಂಡಿತಗೊಂಡಿರುವ ನ್ಯಾಶನಲ್ ಹೆರಾಲ್ಡ್ ಸುದ್ದಿಪತ್ರಿಕೆಗೆ ಸಂಬಂಧಿಸಿದ ಕಪ್ಪು ಹಣ ಬಿಳುಪು ಪ್ರಕರಣದಲ್ಲಿ ತನಗೆ ಸಮರ್ಪಕ ಪುರಾವೆಗಳು ದೊರೆತಲ್ಲಿ ತಾನು ಕಾಂಗ್ರೆಸ್ ಪಕ್ಷವನ್ನು ಆರೋಪಿಯಾಗಿಸುವುದಾಗಿ ಜಾರಿ ನಿರ್ದೇಶನಾಲಯವು ಬುಧವಾರ ತಿಳಿಸಿದೆ.

ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿ.ರಾಜು ಅವರು ನ್ಯಾಶನಲ್ ಹೆರಾಲ್ಡ್ ಪ್ರಕರಣದ ದೈನಂದಿನ ಆಲಿಕೆಯನ್ನು ನಡೆಸುತ್ತಿರುವ ದಿಲ್ಲಿಯ ವಿಶೇಷ ನ್ಯಾಯಾಲಯದ ಮುಂದೆ ಈ ಹೇಳಿಕೆಯನ್ನು ನೀಡಿದ್ದಾರೆ.

‘‘ಅಖಿಲ ಭಾರತ ಕಾಂಗ್ರೆಸ್ ಸಮಿತಿಯನ್ನು ನಾನು ಆರೋಪಿಯಾಗಿ ಮಾಡಿಲ್ಲ. ಹಾಗೆಂದು ಭವಿಷ್ಯದಲ್ಲಿ ಅದನ್ನು ಆರೋಪಿಯಾಗಿ ಮಾಡಲು ನನಗಿರುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ನಮಗೆ ಸಮರ್ಪಕ ಪುರಾವೆ ಲಭಿಸಿದಲ್ಲಿ ನಾವು ಅವರನ್ನು ಆರೋಪಿಯಾಗಿ ಮಾಡಬಹುದಾಗಿದೆ’’ ಎಂದು ಎಎಸ್‌ಐ ರಾಜು ತಿಳಿಸಿದ್ದಾರೆ.

ನ್ಯಾಶನಲ್ ಹೆರಾಲ್ಡ್ ಸುದ್ದಿಪತ್ರಿಕೆಯ ಪ್ರಕಾಶನ ಸಂಸ್ಥೆಯಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್)ಗೆ ಸೇರಿದ 2 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಕಬಳಿಸಲು ನಡೆದ ಸಂಚಿನ ಹಿಂದೆ ಕಾಂಗ್ರೆಸ್ ಪಕ್ಷದ ಸಂಸದೀಯ ಸಮಿತಿಯ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಲೋಕಸಭಾದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಇದ್ದರೆಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿತು.

ಎಜೆಎಲ್ ಪ್ರಕಾಶನಸಂಸ್ಥೆಯು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಸ್ಥಾಪಿಸಿದ್ಧ ನ್ಯಾಶನಲ್ ಹೆರಾಲ್ಡ್ ದಿನಪತ್ರಿಕೆಯನ್ನು ಪ್ರಕಟಿಸುತ್ತಿತ್ತು.

ಕಾಂಗ್ರೆಸ್ ಪಕ್ಷದಿಂದ ಎಜೆಎಲ್ ಪಡೆದುಕೊಂಡಿದ್ದ 90 ಕೋಟಿ ರೂ. ಸಾಲಕ್ಕಾಗಿ, ಸಂಸ್ಥೆಯ 2 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ವರ್ಗಾಯಿಸಿಕೊಳ್ಳಲು ಯಂಗ್ ಇಂಡಿಯನ್ ಎಂಬ ಸಂಸ್ಥೆಯನ್ನು ರೂಪಿಸಲಾಗಿತ್ತು. ಇದರಲ್ಲಿ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಶೇ.76ರಷ್ಟು ಶೇರುಗಳನ್ನು ಹೊಂದಿದ್ದರು ಎಂದು ರಾಜು ತಿಳಿಸಿದರು.

ಹಿರಿಯ ಕಾಂಗ್ರೆಸ್ ನಾಯಕರ ಸೂಚನೆಯ ಮೇರೆಗೆ ಜಾಹೀರಾತು ಹಣವನ್ನು ಕೂಡಾ ಎಜೆಎಲ್‌ಗೆ ಪಾವತಿಸಲಾಗಿತ್ತು ಎಂದು ಈ.ಡಿ. ತಿಳಿಸಿದೆ.

ಇದಕ್ಕೂ ಮುನ್ನ ಮೇ 21ರಂದು ನಡೆದ ಆಲಿಕೆಯಲ್ಲಿ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ನ್ಯಾಶನಲ್ ಹೆರಾಲ್ಡ್ ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿದ 142 ಕೋಟಿ ರೂ.‘ಅಪರಾಧಿಕ ಆದಾಯವನ್ನು’ ಗಳಿಸಿದ್ದರು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News