ನಾಗರಿಕ ಸೇವಾ ಪರೀಕ್ಷೆಗೆ ಉಚಿತ ತರಬೇತಿ | ಜಾಮಿಯಾ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Update: 2024-05-07 17:30 GMT

ಹೊಸದಿಲ್ಲಿ : ದಿಲ್ಲಿಯ ಕೇಂದ್ರೀಯ ವಿಶ್ವವಿದ್ಯಾನಿಲಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿ(RCA)ಗೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಜಾಮಿಯಾದ RCA ವಿಭಾಗವು SC, ST, ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿದೆ. ನಾಗರಿಕ ಸೇವೆಗಳ ಪರೀಕ್ಷೆ 2025 ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವ ಪದವೀಧರರು RCA-JMI ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಈ ವರ್ಷ RCA ಅಕಾಡೆಮಿಯಲ್ಲಿ 100 ಮಂದಿಗೆ ಅವಕಾಶವಿದೆ. ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಮೇ 19, 2024 ಕೊನೆಯ ದಿನವಾಗಿದ್ದು, www.jmicoe.in ವೆಬ್‌ಸೈಟ್‌ ಮೂಲಕ ರೂ. 950 ಶುಲ್ಕದೊಂದಿಗೆ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದಾಗಿದೆ.

ಲಿಖಿತ ಪರೀಕ್ಷೆಯು ಜೂನ್ 1, 2024 ರಂದು ನಡೆಯಲಿದ್ದು, ದಿಲ್ಲಿ, ಶ್ರೀನಗರ, ಜಮ್ಮು, ಹೈದರಾಬಾದ್, ಗುವಾಹಟಿ, ಮುಂಬೈ, ಪಾಟ್ನಾ, ಲಕ್ನೋ, ಬೆಂಗಳೂರು, ಮತ್ತು ಮಲಪ್ಪುರಂ (ಕೇರಳ) ಸೇರಿದಂತೆ ಹತ್ತು ನಗರಗಳಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ ಎಂದು ಪ್ರಕಟನೆ ತಿಳಿಸಿದೆ.

 

 

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News