×
Ad

ಪಕ್ಷದ ದಿಲ್ಲಿ ಕಚೇರಿಯನ್ನು ಎಲ್ಲಾ ಕಡೆಗಳಿಂದಲೂ ಸೀಲ್‌ ಮಾಡಲಾಗಿದೆ: ಆಪ್‌ ಆರೋಪ

Update: 2024-03-23 16:23 IST

ಆತಿಶಿ | Photo: PTI 

ಹೊಸದಿಲ್ಲಿ: ದಿಲ್ಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಡಿ ಕಸ್ಟಡಿಯಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ನೀಡಿರುವ ಸಂದೇಶವನ್ನು ಅವರ ಪತ್ನಿ ಸುನೀತಾ ಓದುತ್ತಿರುವ ವೀಡಿಯೋವನ್ನು ಆಪ್‌ ಪೋಸ್ಟ್‌ ಮಾಡಿದ ಬೆನ್ನಲ್ಲೇ ಪಕ್ಷದ ದಿಲ್ಲಿ ಕಚೇರಿಯನ್ನು ಪೊಲೀಸರು ಎಲ್ಲಾ ಕಡೆಗಳಿಂದ ಸೀಲ್‌ ಮಾಡಿದ್ದಾರೆಂದು ಆಪ್‌ ನಾಯಕರು ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ದಿಲ್ಲಿ ಸಚಿವೆ ಆತಿಶಿ, “ದಿಲ್ಲಿಯ ಐಟಿಒ ನಲ್ಲಿರುವ ಪಕ್ಷದ ಕಚೇರಿಯನ್ನು ಎಲ್ಲಾ ಕಡೆಗಳಿಂದ ಸೀಲ್‌ ಮಾಡಲಾಗಿದೆ. ಚುನಾವಣೆ ಹತ್ತಿರದಲ್ಲಿರುವಾಗ ರಾಷ್ಟ್ರೀಯ ಪಕ್ಷವೊಂದರ ಕಚೇರಿಯನ್ನು ಈ ರೀತಿ ಹೇಗೆ ಬಂದ್‌ ಮಾಡಬಹುದು?” ಎಂದು ಪ್ರಶ್ನಿಸಿದ್ದಾರೆ.

ಇದರ ವಿರುದ್ಧ ದೂರು ನೀಡಲು ಅನುವಾಗಲು ಚುನಾವಣಾ ಆಯೋಗವನ್ನು ಭೇಟಿಯಾಗಲು ಸಮಯಾವಕಾಶ ಕಲ್ಪಿಸಲು ಆಪ್‌ ಕೇಳಿಕೊಳ್ಳಲಿದೆ ಎಂದು ಅವರು ಹೇಳಿದರು.

ಆಪ್‌ನ ರಾಷ್ಟ್ರೀಯ ವಕ್ತಾರ ಸೌರಭ್‌ ಭಾರದ್ವಾಜ್‌ ಕೂಡ ಪ್ರತಿಕ್ರಿಯಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News