×
Ad

ರಾಜಕೋಟ್‌ ಗೇಮ್‌ ಝೋನ್‌ ದುರಂತ : ಇನ್ನೊಬ್ಬ ಪಾಲುದಾರನ ಬಂಧನ

Update: 2024-05-28 11:15 IST

PC : NDTV 

ಅಹ್ಮದಾಬಾದ್:‌ ಕಳೆದ ವಾರ ಕನಿಷ್ಠ 27 ಜನರನ್ನು ಬಲಿ ಪಡೆದ ರಾಜಕೋಟ್‌ ಟಿಆರ್‌ಪಿ ಗೇಮ್‌ ಝೋನ್‌ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಟಿ ಆರ್ ಪಿ ಗೇಮ್‌ ಝೋನ್‌ನ ಇನ್ನೂ ಒಬ್ಬ ಪಾಲುದಾರನನ್ನು ಪೊಲೀಸರು ಬಂಧಿಸಿದ್ದಾರೆ.

ರೇಸ್‌ವೇ ಎಂಟರ್‌ಪ್ರೈಸಸ್‌ನ ಐದು ಮಂದಿ ಪಾಲುದಾರರೊಂದಿಗೆ ಟಿಆರ್‌ಪಿ ಗೇಮ್‌ ಝೋನ್‌ ನಡೆಸುತ್ತಿದ್ದ ಧವಲ್‌ ಕಾರ್ಪೊರೇಷನ್‌ ಮಾಲೀಕ ಧವಲ್‌ ಠಕ್ಕರ್‌ ಎಂಬಾತನನ್ನು ನೆರೆಯ ರಾಜಸ್ಥಾನದ ಅಬ್‌ ರಸ್ತೆಯಲ್ಲಿ ಸೋಮವಾರ ರಾತ್ರಿ ಬಂಧಿಸಲಾಗಿದೆ.

ಶನಿವಾರ ಸಂಭವಿಸಿದ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಇಲ್ಲಿಯ ತನಕ ಬಂಧಿತರಾದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಘಟನೆ ಸಂಬಧ ಪಾಲುದಾರರಾದ ಅಶೋಕ್‌ ಸಿಂಗ್‌ ಜಡೇಜಾ, ಕಿರಿಟ್‌ಸಿಂಗ್‌ ಜಡೇಜಾ ಮತ್ತು ಪ್ರಕಾಶ್‌ಚಂದ್‌ ಹಿರನ್‌ ಸಹಿತ ಆರು ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಈ ಘಟನೆ ಸಂಬಂಧ ತನಿಖೆಗೆ ಗುಜರಾತ್‌ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News