×
Ad

ಗಾಯದಿಂದ ಬಳಲಿದರೂ ಮತ್ತೆ ಬ್ಯಾಟಿಂಗ್‌ಗೆ ಇಳಿದ ಪಂತ್; ಜುರೆಲ್‌ ಗೆ ಕೀಪಿಂಗ್ ಜವಾಬ್ದಾರಿ

Update: 2025-07-24 18:36 IST

Photo credit:X/BCCI

ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ 2ನೇ ದಿನದಂದು ಭಾರತದ ಉಪನಾಯಕ ರಿಷಭ್ ಪಂತ್ ತಮ್ಮ ಗಾಯದ ನಡುವೆಯೂ ಮತ್ತೆ ಬ್ಯಾಟಿಂಗ್‌ ಗೆ ಇಳಿದಿದ್ದಾರೆ. ಬಲ ಕಾಲಿನ ಬೆರಳಿಗೆ ಮುರಿತವಾಗಿದ್ದರೂ ಪಂತ್ ಬ್ಯಾಟಿಂಗ್ ಮಾಡಲು ಲಭ್ಯವಿರುವುದಾಗಿ ಬಿಸಿಸಿಐ ಘೋಷಿಸಿದೆ. ಆದರೆ, ಅವರು ವಿಕೆಟ್ ಕೀಪಿಂಗ್ ಕರ್ತವ್ಯಗಳನ್ನು ನಿರ್ವಹಿಸುವುದಿಲ್ಲ.

ಟೆಸ್ಟ್ ಪಂದ್ಯದ ಮೊದಲ ದಿನದ ಅಂತಿಮ ಅವಧಿಯಲ್ಲಿ, ಕ್ರಿಸ್ ವೋಕ್ಸ್ ಎಸೆತವೊಂದನ್ನು ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದ ಪಂತ್ ಅವರ ಬಲ ಕಾಲಿಗೆ ಬಲವಾದ ಹೊಡೆತ ಬಿದ್ದ ಪರಿಣಾಮ ಅವರು ಮೈದಾನದಿಂದ ಹೊರಹೋಗಬೇಕಾಯಿತು. ತಕ್ಷಣವೇ ಅವರನ್ನು ಸ್ಕ್ಯಾನ್‌ ಗಳಿಗೆ ಕರೆದೊಯ್ಯಲಾಗಿದ್ದು, ಕಾಲ್ಬೆರಳಿಗೆ ಮುರಿತವಿರುವುದು ದೃಢಪಟ್ಟಿದೆ.

“ರಿಷಭ್ ಪಂತ್ ಮುಂದಿನ ಪಂದ್ಯಗಳಲ್ಲಿ ಕೀಪಿಂಗ್ ಮಾಡಲಾರರು. ಧ್ರುವ್ ಜುರೆಲ್ ಅವರು ಬದಲಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ. ಪಂತ್ ಬ್ಯಾಟಿಂಗ್‌ ಗೆ ಲಭ್ಯವಿದ್ದಾರೆ,” ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News