×
Ad

ಕ್ರಾಶ್ ಆದ ಚಿನಿವಾರ ಪೇಟೆ| ಮಂಗಳೂರಿನಲ್ಲಿ ಚಿನ್ನದ ದರ ಭಾರೀ ಕುಸಿತ: ಇಂದಿನ ದರವೆಷ್ಟು?

Update: 2026-02-02 11:11 IST

ಸಾಂದರ್ಭಿಕ ಚಿತ್ರ

ಜನವರಿ ಆರಂಭದಿಂದಲೇ ಏರುಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಶುಕ್ರವಾರದ ನಂತರ ಕುಸಿತದ ಹಾದಿಯಲ್ಲಿದ್ದು, ಮೂರು ದಿನಗಳಲ್ಲಿ ಸುಮಾರು ಮೂರು ಸಾವಿರ ರೂ. ಕುಸಿದು 15 ಸಾವಿರದ ಬಳಿ ತಲುಪಿವೆ.

ಕೇಂದ್ರ ಬಜೆಟ್‌ಗೆ ಮುನ್ನವೇ ಕುಸಿತದ ಹಾದಿಯಲ್ಲಿದ್ದ ಚಿನ್ನ, ಬಜೆಟ್‌ ನಂತರವೂ ಸೋಮವಾರ ಇಳಿಕೆಯಾಗುತ್ತಲೇ ಇದೆ. ಸತತ ಮೂರು ದಿನಗಳಲ್ಲಿ ಮೂರು ಸಾವಿರದ ಸಮೀಪ ಕುಸಿತ ಕಂಡಿದೆ. MCX ಮಾರುಕಟ್ಟೆಯಲ್ಲಿ ಚಿನ್ನದ ಫ್ಯೂಚರ್ಸ್ ದರ ಶೇ.6ರಷ್ಟು ಕುಸಿತ ಕಂಡಿದೆ. ಬೆಳ್ಳಿಯೂ ಕುಸಿತದ ಹಾದಿಯಲ್ಲಿದೆ. ಇಂದು ಸೋಮವಾರ ಗ್ರಾಂಗೆ 50 ರೂ.ನಷ್ಟು ಕುಸಿದ ಬೆಳ್ಳಿ ಕೆಜಿಗೆ 3 ಲಕ್ಷ ರೂ. ತಲುಪಿದೆ.

ಚಿನ್ನದ ಬೆಲೆ ಕುಸಿತಕ್ಕೆ ಡಾಲರ್ ಮೌಲ್ಯದಲ್ಲಿ ಏರಿಕೆಯಾಗಿರುವುದೂ ಮುಖ್ಯ ಕಾರಣವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಡ್ ಅಧ್ಯಕ್ಷ ಸ್ಥಾನಕ್ಕೆ ಕೆವಿನ್ ವಾರ್ಷ್ ಅವರನ್ನು ಆರಿಸಿರುವುದು ಹಾಗೂ ಬಡ್ಡಿದರ ಕಡಿತದ ಸಾಧ್ಯತೆಯನ್ನು ಹೂಡಿಕೆದಾರರು ಗಮನಿಸಿದ ಕಾರಣ ಡಾಲರ್ ಮೌಲ್ಯದಲ್ಲಿ ಏರಿಕೆಯಾಗಿದೆ.

ಇತ್ತ ಭಾರತದಲ್ಲಿ ರವಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಿದ ನಂತರ ಚಿನ್ನದ ದರ ಶೇ. 3 ಮತ್ತು ಬೆಳ್ಳಿ ಬೆಲೆ ಶೇ. 9ರಷ್ಟು ಕುಸಿದಿವೆ. ಬಜೆಟ್‌ನಲ್ಲಿ ಚಿನ್ನ-ಬೆಳ್ಳಿ ಮೇಲಿನ ಆಮದು ಕಸ್ಟಮ್ಸ್ ಸುಂಕವನ್ನು ಯಥಾಸ್ಥಿತಿಯಲ್ಲಿ ಇರಿಸಲಾಗಿದೆ.

ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?

ಸೋಮವಾರ, ಫೆಬ್ರವರಿ 02ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಭಾರೀ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,153 (-905) ರೂ.ಗೆ ಕುಸಿದಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,890 (-830) ರೂ. ಹಾಗೂ ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,365 (-679) ರೂ.ಗೆ ತಲುಪಿದೆ.

ಬೆಳ್ಳಿಯ ಬೆಲೆಯಲ್ಲೂ ಕುಸಿತ

ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಮಾಧ್ಯಮಗಳಿಗೆ ನೀಡಿರುವ ಮಾಹಿತಿಯ ಪ್ರಕಾರ, ರವಿವಾರ ಬೆಳ್ಳಿ ಬೆಲೆ ಕೆಜಿಗೆ 72,500 ರೂ. ಅಂದರೆ ಶೇ. 18.85ರಷ್ಟು ಕುಸಿದು 3,12,000 ರೂ.ಗೆ ತಲುಪಿದೆ. ಗುರುವಾರ ಗರಿಷ್ಠ ದಾಖಲೆ ಮಟ್ಟವಾದ ಪ್ರತಿ ಕೆಜಿಗೆ 4,04,500 ರೂ. ತಲುಪಿದ ನಂತರ ಮೂರೇ ದಿನಗಳಲ್ಲಿ ತೀವ್ರ ಇಳಿಕೆ ಕಂಡಿದೆ. ಹಾಗಿದ್ದರೂ, 2025 ಡಿಸೆಂಬರ್ 31ಕ್ಕೆ ಹೋಲಿಸಿದರೆ 2,39,000 ರೂ.ಗಿಂತ 73,000 ರೂ. ಅಂದರೆ ಶೇ. 30.5ರಷ್ಟು ಏರಿಕೆಯಲ್ಲಿ ರವಿವಾರ ವಹಿವಾಟು ನಡೆಸುತ್ತಿದೆ.

ಆದರೆ ಸೋಮವಾರ ಮಾರುಕಟ್ಟೆ ತೆರೆದ ತಕ್ಷಣ ಬೆಳ್ಳಿಯ ಬೆಲೆ ಇನ್ನಷ್ಟು ಕುಸಿತ ಕಂಡಿದೆ. ಇಂದು ಸೋಮವಾರ ಗ್ರಾಂಗೆ 50 ರೂ.ನಷ್ಟು ಕುಸಿದು ಬೆಳ್ಳಿ ಕೆಜಿಗೆ 3 ಲಕ್ಷ ರೂ. ತಲುಪಿದೆ.

ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು):

ದಿಲ್ಲಿ – 24 ಕ್ಯಾರೆಟ್ 15,168 (-905) ರೂ.; 22 ಕ್ಯಾರೆಟ್ 13,905 (-830) ರೂ.

ಮುಂಬೈ – 24 ಕ್ಯಾರೆಟ್ 15,153 (-905) ರೂ.; 22 ಕ್ಯಾರೆಟ್ 13,890 (-830) ರೂ.

ಅಹಮದಾಬಾದ್ – 24 ಕ್ಯಾರೆಟ್ 15,158 (-905) ರೂ.; 22 ಕ್ಯಾರೆಟ್ 13,895 (-830) ರೂ.

ಚೆನ್ನೈ – 24 ಕ್ಯಾರೆಟ್ 15,218 (-1,037) ರೂ.; 22 ಕ್ಯಾರೆಟ್ 13,950 (-950) ರೂ.

ಕೋಲ್ಕತ್ತಾ – 24 ಕ್ಯಾರೆಟ್ 15,153 (-905) ರೂ.; 22 ಕ್ಯಾರೆಟ್ 13,890 (-830) ರೂ.

ಹೈದರಾಬಾದ್ – 24 ಕ್ಯಾರೆಟ್ 15,153 (-905) ರೂ.; 22 ಕ್ಯಾರೆಟ್ 13,890 (-830) ರೂ.

ಜೈಪುರ – 24 ಕ್ಯಾರೆಟ್ 15,168 (-905) ರೂ.; 22 ಕ್ಯಾರೆಟ್ 13,905 (-830) ರೂ.

ಭೋಪಾಲ್ – 24 ಕ್ಯಾರೆಟ್ 15,158 (-905) ರೂ.; 22 ಕ್ಯಾರೆಟ್ 13,895 (-830) ರೂ.

ಲಖನೌ – 24 ಕ್ಯಾರೆಟ್ 15,168 (-905) ರೂ.; 22 ಕ್ಯಾರೆಟ್ 13,905 (-830) ರೂ.

ಚಂಡೀಗಢ – 24 ಕ್ಯಾರೆಟ್ 15,168 (-905) ರೂ.; 22 ಕ್ಯಾರೆಟ್ 13,905 (-830) ರೂ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News