ಜಮ್ಮುಕಾಶ್ಮೀರ| ಬಾರಾಮುಲ್ಲಾದಲ್ಲಿ 4.7 ತೀವ್ರತೆಯ ಭೂಕಂಪನ
Photo| timesofindia
ಶ್ರೀನಗರ: ಸೋಮವಾರ ಬೆಳಿಗ್ಗೆ 5.35ಕ್ಕೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ 4.7 ತೀವ್ರತೆಯ ಭೂಕಂಪನ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಭೂಕಂಪನ ಕೇಂದ್ರವು ಪಟ್ಟನ್ ಪ್ರದೇಶದಲ್ಲಿತ್ತು. ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ ಪ್ರಕಾರ, ಈ ಭೂಕಂಪನ 10 ಕಿಮೀ ಆಳದಲ್ಲಿ ಸಂಭವಿಸಿದೆ ಎನ್ನಲಾಗಿದೆ.
ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ ಪ್ರಕಾರ, ಗುಲ್ಮಾರ್ಗ್ ಮತ್ತು ಪಶ್ಚಿಮ ಶ್ರೀನಗರದಲ್ಲಿ ಭೂಕಂಪನ ಕೇಂದ್ರವಿತ್ತು ಎಂದು ಹೇಳಲಾಗಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲೂ ಭೂಕಂಪ
ಸೋಮವಾರ ಬೆಳಗಿನ ಜಾವ 3.30ರ ಸುಮಾರಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 4.6 ತೀವ್ರತೆಯಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಇದರ ಕೇಂದ್ರಬಿಂದು 9.03° ಉತ್ತರ ಅಕ್ಷಾಂಶ ಮತ್ತು 92.78° ಪೂರ್ವ ರೇಖಾಂಶದಲ್ಲಿದೆ ಎಂದು ತಿಳಿಸಿದೆ.