×
Ad

ಜಾಮೀನು ಅರ್ಜಿ | ಆರೋಪಿಯ ಕ್ರಿಮಿನಲ್ ಪೂರ್ವಾಪರಗಳ ಬಹಿರಂಗಕ್ಕೆ ಹೈಕೋರ್ಟ್ಗಳಿಗೆ ಸುಪ್ರೀಂ ಸೂಚನೆ

Update: 2025-07-18 21:49 IST

ಸುಪ್ರೀಂ | PTI 

ಹೊಸದಿಲ್ಲಿ,ಜು.18: ಜಾಮೀನು ಅರ್ಜಿಗಳಲ್ಲಿ ಕ್ರಿಮಿನಲ್ ಪೂರ್ವಾಪರಗಳನ್ನು ಬಹಿರಂಗಗೊಳಿಸುವಂತೆ ಆರೋಪಿಗೆ ನಿರ್ದೇಶನವನ್ನು ತಾನು ಹೊರಡಿಸಿರುವ ನಿಯಮಗಳಲ್ಲಿ ಸೇರಿಸಿಕೊಳ್ಳುವುದನ್ನು ಪರಿಗಣಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಎಲ್ಲ ಉಚ್ಚ ನ್ಯಾಯಾಲಯಗಳಿಗೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್,ಸಂಜಯ್ ಕರೋಲ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಧೀಶರ ವಿರುದ್ಧ ರಾಜಸ್ಥಾನ ಉಚ್ಚ ನ್ಯಾಯಾಲಯದ ಕಟ್ಟುನಿಟ್ಟಿನ ಕ್ರಮಗಳನ್ನು ಅನಗತ್ಯವೆಂದು ತೆಗೆದುಹಾಕಿದ ಸಂದರ್ಭದಲ್ಲಿ ಈ ಆದೇಶವನ್ನು ಹೊರಡಿಸಿತು.

‘ದೇಶದ ಪ್ರತಿಯೊಂದೂ ಉಚ್ಚ ನ್ಯಾಯಾಲಯವು ತನ್ನ ನಿಯಮಗಳಲ್ಲಿ ಮತ್ತು/ಅಥವಾ ಕ್ರಿಮಿನಲ್ ಪಾರ್ಶ್ವ ನಿಯಮಗಳಲ್ಲಿ ಇಂತಹುದೇ ನಿಬಂಧನೆಯನ್ನು ಸೇರಿಸಿಕೊಳ್ಳುವುದನ್ನು ಪರಿಗಣಿಸಬೇಕು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ಏಕೆಂದರೆ ಅದು ಆರೋಪಿಯು ಹಿಂದೆ ದಾಖಲಾಗಿದ್ದ ಯಾವುದೇ ಇತರ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದನೇ/ಳೇ ಎನ್ನುವುದನ್ನು ಬಹಿರಂಗಗೊಳಿಸುವ ಬಾಧ್ಯತೆಯನ್ನು ವಿಧಿಸುತ್ತದೆ’ ಎಂದು ಪೀಠವು ಹೇಳಿತು.

ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ತನ್ನ ನಿಯಮಗಳಲ್ಲಿ ಇಂತಹ ನಿಬಂಧನೆಯನ್ನು ಹೊಂದಿರುವುದನ್ನು ಸರ್ವೋಚ್ಚ ನ್ಯಾಯಾಲಯವು ಉಲ್ಲೇಖಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News