×
Ad

199 ಕೋಟಿ ರೂ.ತೆರಿಗೆ ಪ್ರಕರಣ: ಕಾಂಗ್ರೆಸ್‌ಗೆ ಸಂಕಷ್ಟದಿಂದ ಮುಕ್ತಿಯಿಲ್ಲ, ನ್ಯಾಯಾಧಿಕರಣದಲ್ಲಿ ಮೇಲ್ಮನವಿ ವಜಾ

Update: 2025-07-22 22:10 IST

ಸಾಂದರ್ಭಿಕ ಚಿತ್ರ | PTI

 

ಹೊಸದಿಲ್ಲಿ: ಕಾಂಗ್ರೆಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ(ಐಟಿಎಟಿ)ವು,199 ಕೋಟಿ ರೂ.ಗಳ ತೆರಿಗೆ ಪಾವತಿಗೆ ಆದೇಶವನ್ನು ಎತ್ತಿ ಹಿಡಿದಿದೆ.

ದ್ವಿಸದಸ್ಯ ಪೀಠವು ಸೋಮವಾರ ಹೊರಡಿಸಿದ ವಿವರವಾದ ಆದೇಶದಲ್ಲಿ ತೆರಿಗೆ ವಿನಾಯಿಯನ್ನು ಪಡೆಯಲು ಅಗತ್ಯವಾದ ಪ್ರಮುಖ ಷರತ್ತುಗಳನ್ನು ಪೂರೈಸಲು ಕಾಂಗ್ರೆಸ್ ವಿಫಲಗೊಂಡಿದೆ ಎಂದು ಹೇಳಿದೆ.

ಫೆ.2.2019ರಂದು ಕಾಂಗ್ರೆಸ್ ಸಲ್ಲಿಸಿದ್ದ ರಿಟರ್ನ್ ಅದನ್ನು ವಿನಾಯತಿಗೆ ಅರ್ಹವನ್ನಾಗಿಸುವ ಗಡುವನ್ನು ಮೀರಿತ್ತು ಎಂದು ನ್ಯಾಯಾಧಿಕರಣವು ಬೆಟ್ಟು ಮಾಡಿದೆ. ಪಕ್ಷವು 2018-19ನೇ ತೆರಿಗೆ ವರ್ಷಕ್ಕಾಗಿ ಆದಾಯ ತೆರಿಗೆ ಕಾಯ್ದೆಯ 13ಎ ಕಲಮ್‌ನಿಂದ ವಿನಾಯಿತಿಯನ್ನು ಕೋರಿತ್ತು.

ರಾಜಕೀಯ ಪಕ್ಷಗಳು ಶಾಸನಬದ್ಧ ಗಡುವಿನ ನಂತರ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದರೂ,ಕಾನೂನು ಮಿತಿಗಳನ್ನು ಉಲ್ಲಂಘಿಸಿ ನಗದು ದೇಣಿಗೆಗಳನ್ನು ಸ್ವೀಕರಿಸಿದ್ದರೂ ವಿನಾಯಿತಿಯನ್ನು ನೀಡಲಾಗುತ್ತದೆ.

ಕಲಂ 139(1)ರಡಿ ವಿಸ್ತರಿತ ಗಡುವು ಡಿ.31,2018ರ ಬಳಿಕ ಫೆ.2,2019ರಂದು ಕಾಂಗ್ರೆಸ್ ಪಕ್ಷವು ವಿತ್ತವರ್ಷಕ್ಕಾಗಿ ತನ್ನ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿತ್ತು. 199.15 ಕೋ.ರೂ.ಗಳು ಕಲಂ 13ಎ ಅಡಿ ವಿನಾಯಿತಿಗೆ ಅರ್ಹವಾಗಿದೆ ಎಂದು ತೋರಿಸಿದ್ದ ಕಾಂಗ್ರೆಸ್ ಶೂನ್ಯ ಆದಾಯ ರಿಟರ್ನ್ ಸಲ್ಲಿಸಿತ್ತು.

ಆದರೆ ಕಾಯ್ದೆಯ 139(4ಬಿ) ಕಲಮ್‌ನಡಿ ಈ ವಿನಾಯಿತಿಯನ್ನು ಪಡೆಯಲು ರಾಜಕೀಯ ಪಕ್ಷಗಳು ಗಡುವಿನೊಳಗೆ ತಮ್ಮ ರಿಟರ್ನ್‌ಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಕಲಂ 12ಎ ಅಡಿ ದತ್ತಿ ಸಂಸ್ಥೆಗಳಂತೆ ವಿಳಂಬಿತ ರಿಟರ್ನ್ ಸಲ್ಲಿಕೆ ವಿನಾಯಿತಿಗೆ ಅವಕಾಶ ನೀಡುತ್ತದೆ ಎಂಬ ಕಾಂಗ್ರೆಸ್ ವಾದವನ್ನು ನ್ಯಾಯಾಧಿಕರಣವು ತಿರಸ್ಕರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News