×
Ad

ಸಿಕ್ಕಿಂ ಪ್ರವಾಹ: ಟಾಲಿವುಡ್ ನಟಿ ನಾಪತ್ತೆ

Update: 2023-10-08 13:03 IST

ಸರಳಾ ಕುಮಾರಿ (Photo:Twitter)

ಹೈದರಾಬಾದ್: ಸೇನಾ ಸಿಬ್ಬಂದಿ ಸೇರಿದಂತೆ 40 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದ ಸಿಕ್ಕಿಂನಲ್ಲಿ ಹಠಾತ್ ಪ್ರವಾಹದಲ್ಲಿ ಟಾಲಿವುಡ್ ನಟಿ ಸರಳಾ ಕುಮಾರಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೆಲೆಸಿರುವ ಅವರ ಮಗಳು ನಬಿತಾ ಅವರು ತನ್ನ ತಾಯಿಯನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಹೈದರಾಬಾದ್‌ನಲ್ಲಿ ನೆಲೆಸಿರುವ ನಟಿ ಇತ್ತೀಚೆಗೆ ಸಿಕ್ಕಿಂಗೆ ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದ ಬಗ್ಗೆ ಮಗಳಿಗೆ ಮೊದಲೇ ತಿಳಿಸಿದ್ದರು.

ಅಕ್ಟೋಬರ್ 3 ರಂದು ತಾಯಿಯೊಂದಿಗೆ ಕೊನೆಯ ಬಾರಿ ಸಂಭಾಷಣೆ ಮಾಡಿದ್ದೆ, ಅದಾದ ಬಳಿಕ ಅವರ ಕುರಿತ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಮಗಳು ನಬಿತಾ ಆತಂಕಪಟ್ಟಿದ್ದಾರೆ.

1983ರಲ್ಲಿ ಮಿಸ್‌ ಆಂಧ್ರಪ್ರದೇಶ ಕಿರೀಟ ಮುಡಿಗೇರಿಸಿ ಚಿತ್ರರಂಗ ಪ್ರವೇಶಿಸಿದ ಸರಳಾ ಕುಮಾರಿ ಹಲವು ತೆಲುಗು ಚಿತ್ರಗಳಲ್ಲಿ ನಟಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News