×
Ad

2026ರಲ್ಲಿ ಭಾರತದಲ್ಲಿ ಮೊದಲ Global Big Cat Summit: ವಿತ್ತ ಸಚಿವೆ ನಿರ್ಮಲಾ ಘೋಷಣೆ

Update: 2026-02-01 21:55 IST

Photo Credit: PTI

ಹೊಸದಿಲ್ಲಿ, ಫೆ. 1: ಹುಲಿ, ಸಿಂಹ, ಚಿರತೆ ಮುಂತಾದ ಬೆಕ್ಕು ಜಾತಿಗೆ ಸೇರಿದ ಪ್ರಾಣಿಗಳ ಸಂರಕ್ಷಣೆ ಬಗ್ಗೆ ಚರ್ಚಿಸಲು ಈ ವರ್ಷ ಭಾರತವು ಮೊದಲ Global Big Cat Summit ಅನ್ನು ಏರ್ಪಡಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರವಿವಾರ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದರು. ಅದೇ ವೇಳೆ, ಒಡಿಶಾ, ಕರ್ನಾಟಕ ಮತ್ತು ಕೇರಳದಲ್ಲಿ ಕಡಲಾಮೆಗಳು ಸುರಕ್ಷಿತವಾಗಿ ಮೊಟ್ಟೆ ಇಡಲು ಸಾಧ್ಯವಾಗುವಂತೆ ‘ಆಮೆ ವಲಯ’ವನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಶೃಂಗ ಸಮ್ಮೇಳನದಲ್ಲಿ 95 ದೇಶಗಳು ಭಾಗವಹಿಸಲಿವೆ.

ಹಕ್ಕಿಗಳ ವೀಕ್ಷಣೆ ಮತ್ತು ಸಂರಕ್ಷಣೆಗಾಗಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಪುಲಿಕಟ್ ಸರೋವರದುದ್ದಕ್ಕೂ ವಲಯವನ್ನು ಸ್ಥಾಪಿಸಲಾಗುವುದು ಎಂದರು.

ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (ಐಬಿಸಿಎ) ಪ್ರಧಾನ ಕಚೇರಿ ಮತ್ತು ಕಾರ್ಯಾಲಯವನ್ನು ಸ್ಥಾಪಿಸುವುದಕ್ಕಾಗಿ ಭಾರತ ಕಳೆದ ವರ್ಷ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು. ಅಳಿವಿನಂಚಿನಲ್ಲಿರುವ ಪ್ರಭೇದಗಳ ರಕ್ಷಣೆಯ ಉದ್ದೇಶದ ‘ಪ್ರಾಜೆಕ್ಟ್ ಟೈಗರ್’ ಯೋಜನೆಯು 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ 2023ರ ಏಪ್ರಿಲ್‌ನಲ್ಲಿ ಏರ್ಪಡಿಸಲಾದ ಸಮಾರಂಭವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಐಬಿಸಿಎಗೆ ಚಾಲನೆ ನೀಡಿದ್ದರು.

ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ಜಾಗ್ವಾರ್ ಮತ್ತು ಪ್ಯೂಮಾ ಪ್ರಾಣಿಗಳ ಸಂರಕ್ಷಣೆಗಾಗಿ ಐಬಿಸಿಎಯನ್ನು ಸ್ಥಾಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News