×
Ad

Jharkhand | ವ್ಯಕ್ತಿಯ ಥಳಿಸಿ ಹತ್ಯೆ

Update: 2026-02-01 20:43 IST

ರಾಂಚಿ, ಫೆ. 1: ವಿವಾದವೊಂದರ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರನ್ನು ಅವರ ನೆರೆಯವರು ಥಳಿಸಿ ಹತ್ಯೆಗೈದ ಘಟನೆ ಇಲ್ಲಿ ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆ ಲಾಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ದಮಾನ್ ಕಂಪೌಂಡ್ ಪ್ರದೇಶದ ದೋಬಿ ಘಾಟ್ ಸಮೀಪ ಶನಿವಾರ ನಡೆದಿದೆ. ಮೃತಪಟ್ಟವರನ್ನು ಮಾಧೇಶ್ವರ ಸಿಂಗ್ (55–60) ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

“ಇಬ್ಬರು ನೆರೆಹೊರೆಯವರ ನಡುವೆ ವಿವಾದ ಇತ್ತು. ಮಾಧೇಶ್ವರ ಸಿಂಗ್ ಅವರ ಪುತ್ರ ಅಂಕಿತ್ ಸಿಂಗ್ ಹಾಗೂ ಅವರ ಸಹೋದರರಾದ ಅಮಾನ್, ಅನಿಕೇತ್ ಒರಾನ್ ನಡುವೆ ಕೆಲವು ವಿಷಯಕ್ಕೆ ಸಂಬಂಧಿಸಿ ಜಗಳ ನಡೆಯಿತು. ನಂತರ ಅದು ಹಿಂಸಾಚಾರಕ್ಕೆ ತಿರುಗಿತು. ಅವರ ಜಗಳವನ್ನು ತಡೆಯಲು ಮಾಧೇಶ್ವರ ಸಿಂಗ್ ಮಧ್ಯೆ ಪ್ರವೇಶಿಸಿದಾಗ ಅಮಾನ್ ಹಾಗೂ ಅನಿಕೇತ್ ಒರಾನ್ ಅವರು ಅವರನ್ನು ತೀವ್ರವಾಗಿ ಥಳಿಸಿದರು. ಇದರಿಂದ ಅವರು ಗಂಭೀರವಾಗಿ ಗಾಯಗೊಂಡರು” ಎಂದು ಡಿಎಸ್ಪಿ (ನಗರ) ಕೆ.ವಿ. ರಾಮನ್ ತಿಳಿಸಿದ್ದಾರೆ.

ಮಾಧೇಶ್ವರ ಸಿಂಗ್ ಅವರನ್ನು ಕೂಡಲೇ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಆರ್‌ಐಎಂಎಸ್) ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಚಿಕಿತ್ಸೆಯ ವೇಳೆ ಮೃತಪಟ್ಟರು ಎಂದು ಅವರು ಹೇಳಿದ್ದಾರೆ.

ಲಾಲ್ಪುರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ರೂಪೇಶ್ ಕುಮಾರ್ ಸಿಂಗ್ ಅವರು, ಅಮಾನ್ ಹಾಗೂ ಅನಿಕೇತ್ ಒರಾನ್ನನ್ನು ಬಂಧಿಸಲಾಗಿದೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News