×
Ad

ಇನ್ನೊಂದು ಆಘಾತಕಾರಿ ಘಟನೆ: ಯುವಕನನ್ನು ಬಲವಂತವಾಗಿ ಪಾದ ನೆಕ್ಕಿಸಿದ ಕಿಡಿಗೇಡಿಗಳು; ಇಬ್ಬರ ಬಂಧನ

Update: 2023-07-08 17:58 IST

Screengrab : Twitter / @zoo_bear

ಗ್ವಾಲಿಯರ್‌: ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆಗೈದ ಆಘಾತಕಾರಿ ಘಟನೆಯ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಇನ್ನೊಂದು ಘಟನೆ ವರದಿಯಾಗಿದೆ. ಒಬ್ಬ ವ್ಯಕ್ತಿಯ ಪಾದದ ಹಿಮ್ಮಡಿಯನ್ನು ಇನ್ನೊಬ್ಬನಿಂದ ಬಲವಂತದಿಂದ ನೆಕ್ಕಿಸುವಂತೆ ಮಾಡಿದ ವೀಡಿಯೋವೊಂದು ವೈರಲ್‌ ಆಗಿದೆ. ಗ್ವಾಲಿಯರ್‌ನಲ್ಲಿ ವಾಹನವೊಂದರಲ್ಲಿ ನಡೆದಿದೆ ಎನ್ನಲಾದ ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಸಂತ್ರಸ್ತ ಹಾಗೂ ಆರೋಪಿಗಳು ಗ್ವಾಲಿಯರ್‌ ಜಿಲ್ಲೆಯ ದಬ್ರಾ ಪಟ್ಟಣದವರಾಗಿದ್ದಾರೆ.

ವೈರಲ್‌ ಆಗಿರುವ ವೀಡಿಯೋದಲ್ಲಿ ಸಂತ್ರಸ್ತನಿಗೆ ವ್ಯಕ್ತಯೋರ್ವ ಹಲವಾರು ಬಾರಿ ಕಪಾಳಮೋಕ್ಷಗೈಯ್ಯುತ್ತಿರುವುದು ಹಾಗೂ ʼಗೋಲು ಗುರ್ಜರ್‌ ಬಾಪ್‌ ಹೈ” (ಗೋಲು ಗುರ್ಜರ್‌ ತಂದೆ) ಎಂದು ಹೇಳಲು ಬಲವಂತಪಡಿಸುವುದು ಕಾಣಿಸುತ್ತದೆ.

ಸಂತ್ರಸ್ತನು ಆರೋಪಿಯ ಪಾದದ ಹಿಮ್ಮಡಿಯನ್ನು ನೆಕ್ಕುತ್ತಿರುವುದು ಕಾಣಿಸುತ್ತದೆ. ಆರೋಪಿಯು ಆತನ ಮುಖಕ್ಕೆ ಸತತವಾಗಿ ಹೊಡೆಯುವುದು ಹಾಗೂ ನಿಂದಿಸುತ್ತಿರುವುದು ಕಾಣಿಸುತ್ತದೆ. ಇನ್ನೊಂದು ವೀಡಿಯೋದಲ್ಲಿ ಆತ ಸಂತ್ರಸ್ತನಿಗೆ ಚಪ್ಪಲಿಯಿಂದ ಬಾರಿಸುತ್ತಿರುವುದು ಕಾಣಿಸುತ್ತದೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News