ಉಕ್ರೇನ್‌ನಲ್ಲಿ ಯುವಕನನ್ನು ಥಳಿಸಿಕೊಂದ ರಷ್ಯನ್ ಬೆಂಬಲಿತ ಬಂಡುಕೋರರ ವೀಡಿಯೊ ಬಹಿರಂಗ!

Update: 2023-09-28 06:31 GMT

ಉಕ್ರೇನ್: ಉಕ್ರೇನ್‌ನ ರಷ್ಯ ಬೆಂಬಲಿತ ಬಂಡುಕೋರರು ಐಸಿಸ್ ಉಗ್ರರನ್ನು ನಾಚಿಸುವಂತೆ ಕ್ರೂರವಾಗಿ ವ್ಯಕ್ತಿಯೊಬ್ಬನನ್ನು ಹೊಡೆದುಕೊಲ್ಲುತ್ತಿರುವ ವೀಡಿಯೊ ಬಹಿರಂಗವಾಗಿದೆ. ಮಾದಕವಸ್ತು ಕಳ್ಳಸಾಗಾಟ ನಡೆಸುತ್ತಿದ್ದ ಯುವಕನನ್ನು ಕಂಬಕ್ಕೆ ಕಟ್ಟಿಹಾಕಿ ಅವರು ಹೊಡೆಯುತ್ತಿದ್ದಾರೆ. ಜೊತೆಗೆ ಮಾದಕವಸ್ತು ವ್ಯವಹಾರಸ್ಥರಿಗಿರುವ ಶಿಕ್ಷೆ ಇದು ಹೊಡೆಯುತ್ತ ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿಸುತ್ತಿದೆ. ಯುವಕನು ಕಾಪಾಡಿ ಎಂದು ಬೊಬ್ಬೆಹೊಡೆದರೂ ಅವರು ಅವನನ್ನು ಕೊಲ್ಲದೆ ಬಿಟ್ಟಿಲ್ಲ.

Full View

ಯುಕ್ರೇನ್‌ನ ರಷ್ಯ ಬೆಂಬಲಿತ ಬಂಡುಕೋರರ ಕೃತ್ಯವಿದು. ಇದಕ್ಕೂ ಐಸಿಸ್‌ಗೂ ಸಂಬಂಧವಿಲ್ಲ. ಯುವಕನನ್ನು ಕಟ್ಟಿಹಾಕಿ ಇಲೆಕ್ಟಿಕ್ ವಯರನಿಂದ ಥಳಿಸಲಾಗುತ್ತಿದೆ.

  ಡೊನೆಟ್ಸಿಕ್ ಒಬ್ಲಾಸ್ಟ್ ಕೊಮುನಾರ್ ನಗರದಲ್ಲಿ ಈ ಕ್ರೌರ್ಯ ನಡೆದಿದ್ದು ಇದು ರಷ್ಯ ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶವಾಗಿದೆ. ಒಲ್ಕೋನ್ ಎಂಬ ಮಧ್ಯ ರಷ್ಯದಿಂದ ಬಂಡುಕೋರರ ಸಹಾಯಕ್ಕಾಗಿ ಬಂದ ವ್ಯಕ್ತಿ ಮಾದಕ ವಸ್ತು ಸಾಗಾಟಕಾರನನ್ನು ಹೀಗೆ ಹೊಡೆದುಕೊಂದಿದ್ದಾನೆ. ಮಾದಕವಸ್ತು ಸಾಗಾಟ ಮಾಡುವವರಿಗೆ ಇದೇ ಶಿಕ್ಷೆ ಎಂದು ಆತ ಕಿರಿಚುತ್ತಿರುವುದು ವೀಡಿಯೊದಲ್ಲಿ ಕೇಳಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News