×
Ad

ಲಂಡನ್ | ಖಡ್ಗದಿಂದ ದಾಳಿಗೆ ಬಾಲಕ ಸಾವು; 4 ಮಂದಿಗೆ ಗಾಯ

Update: 2024-04-30 21:03 IST

ಲಂಡನ್ : ಈಶಾನ್ಯ ಲಂಡನ್ನಲ್ಲಿ ವ್ಯಕ್ತಿಯೊಬ್ಬ ಖಡ್ಗವನ್ನು ಝಳಪಿಸುತ್ತಾ ಮನಬಂದಂತೆ ದಾಳಿ ನಡೆಸಿದ್ದು ಗಂಭೀರ ಗಾಯಗೊಂಡಿದ್ದ 13 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇಬ್ಬರು ಪೊಲೀಸರ ಸಹಿತ 4 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈಶಾನ್ಯ ಲಂಡನ್ ನ ರೈಲ್ವೇ ನಿಲ್ದಾಣದ ಬಳಿಯ ಮನೆಯೊಂದರ ಗೋಡೆಗೆ ತನ್ನ ಕಾರನ್ನು ಅಪ್ಪಳಿಸಿದ್ದಾನೆ. ಆಗ ಜನರು ಗುಂಪು ಸೇರಿದಾಗ ಉದ್ದನೆಯ ಖಡ್ಗವನ್ನು ಝಳಪಿಸುತ್ತಾ ಜನರತ್ತ ನುಗ್ಗಿದ್ದಾನೆ. ಮೂವರಿಗೆ ಇರಿತದ ಗಾಯಗಳಾಗಿದ್ದು ತೀವ್ರ ಗಾಯಗೊಂಡ ಬಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು ಆರೋಪಿ ಪೊಲೀಸರ ಮೇಲೆಯೇ ಆಕ್ರಮಣ ನಡೆಸಿದ್ದಾನೆ. ಇಬ್ಬರು ಪೊಲೀಸರು ಗಾಯಗೊಂಡಿದ್ದು ಬಳಿಕ 36 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ಸುದ್ಧಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News