ರಕ್ತದಾನ ಮಾಡಲು ಇಲ್ಲಿದೆ ಸುವರ್ಣವಕಾಶ "ಬ್ಲಡ್ ಡೊನರ್ಸ್" ವಾಟ್ಸಪ್ ಗ್ರೂಪ್

Update: 2016-01-05 03:40 GMT

ಮಂಗಳೂರು:  ರಕ್ತದ ಅವಶ್ಯಕತೆಯಿಂದ ಬೀದಿ ಬೀದಿ ಅಲೆದಾಡುವ ಬಡ ರೋಗಿಗಳ ಕೈ ಹಿಡಿಯಲೆಂದ ಸಾಮಾಜಿ ಕಾಳಜಿಯ ಧ್ಯೇಯದೊಂದಿಗೆ ಇದೀಗ ಬಹು ಬೇಡಿಕೆಯ ಸಾಮಾಜಿಕ ತಾಣವಾದ ವಾಟ್ಸಪ್ ನಲ್ಲಿ ಬ್ಲಡ್ ಡೊನರ್ಸ್ ಮಂಗಳೂರು ವಾಟ್ಸಪ್ ಗ್ರೂಪ್ ಕಾರ್ಯಚರಿಸುತಿದ್ದು, ಸಾಮಿಜಿಕ ತಾಣಗಳಲಿ ಹೆಚ್ಚು ಹೆಚ್ಚು ಪ್ರಸಕ್ತಿ ಪಡೆಯುತಿದೆ.

    ಕಳೆದೊಂದು ವರ್ಷದಿಂದ ಮಂಗಳೂರು ಆಸುಪಾಸಿನ ಆಸ್ಪತ್ರೆಗಳಲ್ಲಿ ತುಂಬಾ ರೋಗಿಗಳಿಗೆ ರಕ್ತದ ಅವಶ್ಯಕತೆಯನ್ನು ಪೂರೈಕೆ ಮಾಡಿ ಕೊಡಲಾಗಿದ್ದು, ಅದು ನಮಗೆ ತುಂಬಾ ಖುಷಿ ತಂದಿದೆ ಎಂದು ಎಡ್ಮಿನ್ಸ್ ಗಳ ಮಾತು. ಒಂದು ದಿವಸ ಓರ್ವ ಪ್ರಾಯದ ಮಹಿಳೆ ಒಂದು ಆಸ್ಪತ್ರೆಯಲ್ಲಿ ರಕ್ತಕ್ಕಾಗಿ ಓಡಾಡುವುದನು ನೋಡಿ ಅವರಿಗೆ ಸಹಾಯ ಮಾಡಲೆಂದೇ  ಅಲ್ಲಿ ಅಕ್ಕಪಕ್ಕದಲ್ಲಿನ ತುಂಬಾ ಜನರಲ್ಲಿ ವಿಚಾರಿಸಿದೆ. ಆದರೆ ಅವರಲ್ಲಿ ಯಾರು  ರಕ್ತ ಕೊಡಲು ತಯಾರಾಗಿಲ್ಲ ನಾವು ಮತ್ತು ನಮ್ಮ ಕೆಲವು ಸ್ನೇಹಿತರು ಸೇರಿ ಅವರಿಗೆಬೇಕಾದ ರಕ್ತ ಕೊಟ್ಟು,  ಅಲ್ಲಿನ ನರ್ಸ್ ಹತ್ತಿರ ನಮ್ಮ ದೂರವಾಣಿ ಸಂಖ್ಯೆ ಕೊಟ್ಟು ಇಂತಹ ರಕ್ತ ಅವಶ್ಯಕತೆ ಬಂದರೆ ನಮ್ಮಗೆ ಕರೆ ಮಾಡಿ ಎಂದು ಹೇಳಿ  ಬಂದಿದ್ದೆವು.  ಅದರ ಮುಂದುವರಿದ ಭಾಗವೇ ಈ ಬ್ಲಡ್ ಡೊನರ್ಸ್ ಎಂಬೂದು ಎಡ್ಮಿನ್ ಗಳ ಮಾತು. 

      ಬ್ಲಡ್ ಡೊನರ್ಸ್ ಎಂಬ ಆರು ವಾಟ್ಸಪ್ ಗ್ರೂಪ್ ಇದ್ದು ರಕ್ತದಾನದ ಬಗ್ಗೆ ಮಾತ್ರ ಮಾಹಿತಿ ಕೊಡುತ್ತಿರುವ ಈ ಗ್ರೂಪ್ ಗಳಲ್ಲಿ,  ಐನೂರಕ್ಕೂ ಹೆಚ್ಚು ಸದಸ್ಯರಿದ್ದಾರೆ.  ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಹೆಚ್ಚೆಚ್ಚು ವೈರಲಾಗುತಿದ್ದು, ಪ್ರಸಂಶೆಗಳೂ ಕೇಳಿ ಬಂದಿದೆ.  ರಕ್ತದಾನದ ಕ್ಯಾಂಪ್ ನಡೆಸುದು ಮುಂದಿನ ಉದ್ದೇಶ ಎಂಬುದು ಎಡ್ಮಿನ್ ಗಳ ಮಾತು.

     ಬ್ಲಡ್ ಡೊನರ್ಸ್ ವಾಟ್ಸಪ್ ಗ್ರೂಪಿನ ಜೊತೆ ಸೇರಲು ಇಚ್ಛಿಸುವವರು ನಿಮ್ಮ ಹೆಸರು , ದೂರವಾಣಿ ಸಂಖ್ಯೆ, ನಿಮ್ಮ ರಕ್ತದ ಗ್ರೂಪ್,  ಈ ಕೆಳಗಿನ ನಂಬರಿಗೆ ವಾಟ್ಸಪ್ ಮೂಲಕ ತಿಳಿಸತಕ್ಕದ್ದು.

 ಸಿದ್ದೀಕ್ ಮಂಜೇಶ್ವರ : +919845707090, ಇಮ್ಮು ಉಳ್ಳಾಲ :  +966565631952, ಇಮ್ಮು ಮದಕ :  +966582298604, ದಾವೂದ್ ಬಜಾಲ್ : +966533163173, ನಿಝಾಮುದ್ದೀನ್ N.U.T : +966536989390,  ನಿಝಾಮ್ ಮಂಕಿಸ್ಟ್ಯಾಂಡ್ : +918951671414

Writer - ಸಿದ್ದೀಕ್ ಮಂಜೇಶ್ವರ

contributor

Editor - ಸಿದ್ದೀಕ್ ಮಂಜೇಶ್ವರ

contributor

Similar News