ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ : ಸಮಾಜ ಬೆಳಗಿದ ಸೇವೆಗೆ ದಶಕದ ಸಂಭ್ರಮ

Update: 2016-01-11 14:01 GMT

ಸ್ಥಾಪನೆ: ಡಿಸೆಂಬರ್ 26 2005

ಧ್ಯೇಯ ವಾಕ್ಯ : Touching Hearts, Directing Destinies

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಹೆಸರೇ ಸೂಚಿಸುವಂತೆ ಪ್ರತಿಭೆಯನ್ನು ಸಂಶೋಧಿಸುವ, ಅರಳಿಸುವ, ಪುರಸ್ಕರಿಸುವ, ಗುರುತಿಸುವ, ಉತ್ತೇಜಿಸುವ ಒಂದು ಸಂಸ್ಥೆ. ನಮ್ಮ ನಡುವೆ ಬೆಳಕಿಗೆ ಬಾರದ ಅದೆಷ್ಠೋ ಪ್ರತಿಭೆಯ ಗಣಿಗಳನ್ನು ಜಗತ್ತಿಗೆ ಪರಿಚಯಿಸುವ ವಿಶಿಷ್ಠ ಕಾರ್ಯವನ್ನು ಟ್ಯಾಲೆಂಟ್ ಸಂಸ್ಥೆ ಮಾಡುತ್ತಾ ಬಂದಿದೆ ಎನ್ನಲು ಸಂತೋಷವಾಗುತ್ತಿದೆ. ನಾಡಿನ ಖ್ಯಾತ ಉದ್ಯಮಿಯೂ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಪುರಸ್ಕೃತರೂ ಆದ ಜನಾಬ್ ಅಬ್ದುಲ್ ರವೂಫ್ ಪುತ್ತಿಗೆಯವರ ಕನಸಿನ ಕೂಸು ಟಿಆರ್‌ಎಫ್. ತನ್ನ ವಿಭಿನ್ನ, ವಿಶಿಷ್ಟ, ವಿನೂತನ ಜನಪರ ಕಾರ್ಯಕ್ರಮಗಳ ಮೂಲಕ ನಾಡಿನ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಈ ಸಂಸ್ಥೆ ಇದೀಗ ತನ್ನ ದಶಮಾನೋತ್ಸವದ ಸಂಭ್ರಮದಲ್ಲಿದೆ. ಕಳೆದ ಹತ್ತು ವರ್ಷಗಳಿಂದ ಶಿಕ್ಷಣ, ಆರೋಗ್ಯ, ಸ್ವ ಉದ್ಯೋಗ, ಕೌನ್ಸೆಲಿಂಗ್, ಮೂಲಭೂತ ಸೌಕರ್ಯ, ಪರಿಸರ ಸಂರಕ್ಷಣೆ, ಅಭಿನಂದನೆ, ಮಹಿಳಾ ಸಬಲೀಕರಣ ಮುಂತಾದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಜ್ಞಾನದಾಹಿಗಳಿಗೆ ಜ್ಞಾನದ ಬೆಳಕನ್ನು ನೀಡುವ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ, ಅಶಕ್ತರಿಗೆ ಆಸರೆಯಾಗುವ, ಪ್ರತಿಭೆಗಳಿಗೆ ಪೋಷಕರಾಗುವ, ಪರಿಸರದ ಸಂರಕ್ಷಕರಾಗುವ, ಸಾಧಕರನ್ನು ಗೌರವಿಸುವ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೊಂದು ಜೀವನಾಡಿಯಾಗಿದೆ. ಸಂಸ್ಥೆಯು ನಿಗದಿತ ಧ್ಯೇಯೋದ್ದೇಶಗಳನ್ನು ಕೇಂದ್ರೀಕರಿಸಿ ಮುನ್ನಡೆಯುತ್ತಿದ್ದರೂ, ಕೆಲವೊಮ್ಮೆ ಕಾಲದ ಬೇಡಿಕೆಗೆ ಅನುಗುಣವಾಗಿ ತನ್ನ ಚಟುವಟಿಕೆಗಳಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಂಡು ಬಂದಿರುತ್ತದೆ. ಈ ದಿಸೆಯಲ್ಲಿ ಟ್ಯಾಲೆಂಟ್ ಎಲ್ಲಾ ಕ್ಷೇತ್ರಗಳಿಗೂ ಕೈ ಹಾಕುತ್ತದೆ ಎನ್ನುವ ಮಾತುಗಳು ಕೇಳಿಬರುವುದು ಸಹಜ. ಟ್ಯಾಲೆಂಟ್‌ನ ಈ ನಡೆಯಿಂದ ಹಲವು ಅಸಹಾಯಕರಿಗೆ ಪ್ರಯೋಜನವಾಗಿದೆ ಹೊರತು ಯಾರಿಗೂ ನಷ್ಠವಾಗಿಲ್ಲ ಎನ್ನುವ ಕಟುಸತ್ಯವನ್ನು ಒಪ್ಪಿಕೊಂಡಾಗ ನೈಜ ಉದ್ದೇಶ ಮನವರಿಕೆಯಾಗಬಹುದು.

ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆ

ಡಿಸೆಂಬರ್ 26 2005 ರಂದು ಟಿ.ಆರ್.ಎಫ್ ಎಂಬ ಸಾಮಾಜಿಕ ಸಂಸ್ಥೆಯ ಉಗಮವಾಯಿತು. ಮಂಗಳೂರಿನ ಸ್ಟೇಟ್ ಬ್ಯಾಂಕ್ ಸಮೀಪದ ಅಲ್ ರಹಬಾ ಪ್ಲಾಝಾದಲ್ಲಿ ಒಲಿಂಪಿಕ್ ಆಟಗಾರ ಹಸನ್ ಆಸಿಫ್ ರವರು ಸಂಸ್ಥೆಯನ್ನು ಉದ್ಘಾಟಿಸಿದರು. ಬಿ.ಎಂ ಹಸನ್ ಹಾಜಿ ಸ್ಮಾರಕ ಕೇಂದ್ರವೆಂದು ಕಛೇರಿಗೆ ನಾಮಕರಣ ಮಾಡಲಾಯಿತು. ಆರಂಭದ ದಿನಗಳಲ್ಲಿ ವಿವಿಧ ತರಬೇತಿ, ಸಾಧಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿತ್ತು. ತದನಂತರ ಕಛೇರಿಯನ್ನು ಬಂದರ್‌ನಲ್ಲಿರುವ ಕಟ್ಟಡವೊಂದಕ್ಕೆ ವರ್ಗಾಯಿಸಲಾಯಿತು. ಕಟ್ಟಡವನ್ನು ಉಚಿತವಾಗಿ ಒದಗಿಸಿದ ಕಟ್ಟಡದ ಮಾಲಿಕ ಜನಾಬ್ ಖಲೀಲ್ ಪಾಂಡೇಶ್ವರ ರವರ ಸಹಕಾರಕ್ಕೆ ನಾವು ಸದಾ ಆಭಾರಿಗಳಾಗಿದ್ದೇವೆ. ಈ ಸಂದರ್ಭದಲ್ಲಿ ಅನೇಕ ತರಬೇತಿ ಮತ್ತು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಅಗತ್ಯ ಸಭಾಂಗಣವನ್ನು ಬದ್ರಿಯಾ ಕಾಲೇಜು ಕಂದಕ ಮತ್ತು ಬಂದರ್ ಸರಕಾರಿ ಉರ್ದು ಪ್ರೌಢಶಾಲೆಯವರು ಒದಗಿಸಿರುತ್ತಾರೆ. ಅವರ ಸಹಕಾರಕ್ಕೆ ಹೃದಯ ತುಂಬಿದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ.

ಅಲ್ಲಾಹನ ಅಪಾರವಾದ ಅನುಗ್ರಹದಿಂದ 2009 ರಲ್ಲಿ ಕಂಕನಾಡಿಯ ವಿಶ್ವಾಸ್ ಕ್ರೌನ್ ಕಟ್ಟಡದಲ್ಲಿ ಸ್ವಂತ ಕಛೇರಿ, ಸಭಾಂಗಣ, ಸ್ಪರ್ಧಾತ್ಮಕ ಪರೀಕ್ಷೆಗಳ ವಾಚನಾಲಯ ಮುಂತಾದ ಸವಲತ್ತುಗಳನ್ನು ಹೊಂದಲು ಸಾಧ್ಯವಾಯಿತು. ಮುಂದಕ್ಕೆ ಟ್ಯಾಲೆಂಟ್ ಸಭಾಂಗಣ ನಿತ್ಯ ಚಟುವಟಿಕೆಗಳ ಕೇಂದ್ರವಾಯಿತು. ಪ್ರತಿನಿತ್ಯ ನೂರಾರು ಮಂದಿ ಭೇಟಿ ಕೊಡುವಂತಾಯಿತು. ಶಿಕ್ಷಣ, ಉದ್ಯೋಗ, ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ಕೇಂದ್ರವಾಗಿ, ಉಚಿತ ಸೇವಾ ಕೇಂದ್ರವಾಗಿ ಎಲ್ಲರ ಗಮನ ಸೆಳೆಯಿತು. ಶಿಕ್ಷಣ ವಂಚಿತರು ಸುಶಿಕ್ಷಿತರಾದರು. ನಿರುದ್ಯೋಗಿಗಳು ಉದ್ಯೋಗಿಗಳಾದರು. ಅಸಹಾಯಕರು ಸಬಲರಾದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹೊಸ ಭರವಸೆಯನ್ನು ಪಡೆದುಕೊಂಡರು. ಕೋಟ್ಯಾಂತರ ವಿದ್ಯಾರ್ಥಿವೇತನಗಳು ಹರಿದು ಬಂದವು. ಐಎಎಸ್, ಐಪಿಎಸ್, ಕೆಎಎಸ್‌ಮೊದಲಾದ ಉನ್ನತ ಹುದ್ದೆಗಳ ಕನಸುಗಳುಹುಟ್ಟಿಕೊಂಡಿತು. ಸಾಧನೆಗೆ ಇನ್ನಷ್ಟು ಕಿಚ್ಚನ್ನು ಕೊಡಲಾಯಿತು. ಹೀಗೆ ಟ್ಯಾಲೆಂಟ್ ಕಳೆದ ಹತ್ತು ವರ್ಷಗಳಲ್ಲಿ ತನ್ನ ಸೇವಾ ಅಭಿಯಾನವನ್ನು ನಿರಂತರವಾಗಿ ಮುಂದುವರೆಸುತ್ತಿದೆ.

ಸಂಸ್ಥೆಯ ಧ್ಯೇಯೋದ್ದೇಶಗಳು

"ಶಾಲಾ ಕಾಲೇಜು, ತಾಂತ್ರಿಕ, ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ವೈಜ್ಞಾನಿಕ ಸಂಸ್ಥೆಗಳನ್ನು ತೆರೆಯುವುದು ಹಾಗೂ ನಿರ್ವಹಿಸುವುದು.

"ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಜನರಲ್ಲಿ ಶೈಕ್ಷಣಿಕ ಜಾಗೃತಿಯನ್ನು ಮೂಡಿಸುವುದು.

"ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಆರ್ಥಿಕ ಸಹಾಯ, ಸಾಲ ಮತ್ತು ಇನ್ನಿತರ ಸವಲತ್ತುಗಳನ್ನು ಒದಗಿಸುವುದು.

"ಸಾರ್ವಜನಿಕರಲ್ಲಿ ಆರೋಗ್ಯ ಪ್ರಜ್ಞೆಯನ್ನು ಮೂಡಿಸುವುದು.ಅದಕ್ಕಾಗಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಆರೋಗ್ಯ ಮಾಹಿತಿ ಶಿಬಿರಗಳನ್ನು ಆಯೋಜಿಸುವುದು.

"ಅರ್ಧದಲ್ಲೇ ಶಾಲೆ ಬಿಟ್ಟ ಯುವಕ ಯುವತಿಯರಿಗಾಗಿ ಮರಳಿ ಬಾ ಶಾಲೆಗೆ ಕೇಂದ್ರಗಳನ್ನು ತೆರೆದು ಶಿಕ್ಷಣವನ್ನು ಮುಂದುವರೆಸಲು ಅವಕಾಶ ಕಲ್ಪಿಸುವುದು.

"ಮಹಿಳಾ ಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ಕಾರ್ಯಕ್ರಮಗಳನ್ನು ಆಯೋಜಿಸುವುದು.

"ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ ನಡೆಸುವುದು.

"ಟೈಲರಿಂಗ್ ಸೆಂಟರ್, ಗುಡಿ ಕೈಗಾರಿಕೆ ಮುಂತಾದ ಸ್ವ ಉದ್ಯೋಗ ತರಬೇತಿ ಕೇಂದ್ರಗಳನ್ನು ತೆರೆದು ವೃತ್ತಿಪರ ತರಬೇತಿಗಳನ್ನು ನೀಡುವುದು.

"ಸರಕಾರಿ, ಅರೆ ಸರಕಾರಿ, ಖಾಸಗಿ ಮತ್ತು ಸ್ವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡುವುದು.

"ನಿರ್ಗತಿಕ ಮಹಿಳೆ ಮತ್ತು ಮಕ್ಕಳಿಗಾಗಿ ಆಶ್ರಯಧಾಮಗಳನ್ನು ತೆರೆಯುವುದು.

"ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಬೆಳೆಸುವುದು ಮತ್ತು ಶಾಂತಿ ಸಾಮರಸ್ಯವನ್ನು ಕಾಪಾಡುವುದು.

"ವಿದ್ಯಾರ್ಥಿವೇತನ ಮತ್ತು ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆಯುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಮಾರ್ಗದರ್ಶನ ಮತ್ತು ಸೇವೆ ಒದಗಿಸುವುದು.

ಸಂಸ್ಥೆಯ ಕಾರ್ಯಚಟುವಟಿಕೆಯ ಕ್ಷೇತ್ರಗಳು

  • ಶಿಕ್ಷಣ
  • ಆರೋಗ್ಯ
  • ಮೂಲಭೂತ ಸೌಕರ್ಯಗಳು
  • ಸ್ವ ಉದ್ಯೋಗ
  • ಜನಜಾಗೃತಿ
  • ಪರಿಸರ ಸಂರಕ್ಷಣೆ
  • ರಾಷ್ಟ್ರೀಯ ಸಮಗ್ರತೆ
  • ಅಭಿನಂದನೆ
  • ಕೌನ್ಸೆಲಿಂಗ್
  • ಮಹಿಳಾ ಸಬಲೀಕರಣ
  • ಪುಸ್ತಕ ಪ್ರಕಾಶನ
  • ಸಾಕ್ಷ್ಯಚಿತ್ರಗಳ ನಿರ್ಮಾಣ

ಶಿಕ್ಷಣ

  • ಮರಳಿ ಬಾ ಶಾಲೆಗೆ ಯೋಜನೆ:

ಟಿಆರ್‌ಎಫ್ ಗೆ ವಿಶೇಷ ಮನ್ನಣೆಯನ್ನು ತಂದುಕೊಟ್ಟ ಯೋಜನೆ ಮರಳಿ ಬಾ ಶಾಲೆಗೆ. ನಮ್ಮ ನಡುವೆ ಅರ್ಧದಲ್ಲೇ ಶಾಲೆ ಬಿಟ್ಟು ಗುಜುರಿ ಹೆಕ್ಕುವ, ಫುಟ್‌ಪಾತ್ ವ್ಯಾಪಾರ ಮಾಡುವ, ಕೂಲಿಕೆಲಸ ಮಾಡುವ ಅದೆಷ್ಟೋ ಸಹೋದರರು, ಮನೆಯಲ್ಲೇ ಬೀಡಿ ಕಟ್ಟುವ ಸಹೋದರಿಯರು ಇದ್ದಾರೆ. ಅಂತವರಲ್ಲಿ ಮತ್ತೆ ಶಿಕ್ಷಣದ ಕನಸನ್ನು ಹುಟ್ಟಿಸಿ ಅವರಿಗೆ ನೇರ ಎಸ್‌ಎಸ್‌ಎಲ್‌ಸಿ/ಪಿಯುಸಿ ಪರೀಕ್ಷೆಗೆ ತರಬೇತಿಯನ್ನು ನೀಡುವ ಯೋಜನೆ ಇದಾಗಿದೆ. ಹೆಣ್ಮಕ್ಕಳಿಗೆ ಮದ್ರಸ ಕಟ್ಟಡದಲ್ಲಿ ಹಗಲು ಹೊತ್ತು ಹಾಗೂ ಯುವಕರಿಗೆ ರಾತ್ರಿ ಹೊತ್ತು ಸಂಘಸಂಸ್ಥೆಗಳ ಕಟ್ಟಡದಲ್ಲಿ ಸ್ಥಳೀಯ ಸ್ವಯಂಸೇವಾ ಶಿಕ್ಷಕರಿಂದ ತರಗತಿ ನಡೆಸಲಾಯಿತು.ಜಮೀಯ್ಯತುಲ್ ಫಲಾಹ್ ಬಿತ್ತಿದ ಈ ಪರಿಕಲ್ಪನೆಯನ್ನು ಸ್ಥಳೀಯ ಸಂಘಸಂಸ್ಥೆಗಳ ಸಹಕಾರದಲ್ಲಿ ರಾಜ್ಯದಾದ್ಯಂತ ಪಸರಿಸಿದ ಕೀರ್ತಿ ಟ್ಯಾಲೆಂಟ್‌ಗೆ ಸಲ್ಲುತ್ತದೆ. ಹೊಸ ಬದುಕು, ಹೊಸ ಚಿಂತನೆ, ಹೊಸ ಕಸನುಗಳಿಗೆ ನಾಂದಿ ಹಾಡಿದ ಈ ಯೋಜನೆಯ ಸಾವಿರಾರು ಫಲಾನುಭವಿ ವಿದ್ಯಾರ್ಥಿಗಳಲ್ಲಿ ಆದ ವಿಸ್ಮಯಕಾರಿ ಬದಲಾವಣೆಗಳು ನಿಜಕ್ಕೂ ಅದ್ಭುತ. ಇಲ್ಲಿ ಕಲಿತ ವಿದ್ಯಾರ್ಥಿಗಳುಹಾಗೂ ಕಲಿಸಿದ ಸ್ವಯಂಸೇವಾ ಶಿಕ್ಷಕರು ಮಾಡಿದ ಸಾಧನೆನಮಗೆ ಪ್ರೇರಕಶಕ್ತಿಯಾಗಿದೆ. ಹೀಗೆ ಟ್ಯಾಲೆಂಟ್ ಅಕ್ಷರ ವಂಚಿತರ ಬಾಳಲ್ಲಿ ಹೊಸ ಬೆಳಕನ್ನು ಮೂಡಿಸುತ್ತಿದೆ.

  • ವಿದ್ಯಾರ್ಥಿವೇತನದ ಉಚಿತ ಸೇವೆ

ಸರಕಾರದಿಂದ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನೇಕ ಸವಲತ್ತುಗಳಿವೆ. ಆ ಸವಲತ್ತುಗಳು ಏನು? ಮತ್ತು ಪಡೆಯುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರಿಸುವಲ್ಲಿ ಟ್ಯಾಲೆಂಟ್ ಯಶಸ್ವಿಯಾಗಿದೆ. ಮೊದಲಿಗೆ ಸರಕಾರದ ಸವಲತ್ತುಗಳ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳ ಮೂಲಕವಿದ್ಯಾರ್ಥಿಗಳು ಹಾಗೂ ಹೆತ್ತವರಲ್ಲಿ ಅರಿವು ಮೂಡಿಸಲಾಗುತ್ತಿದೆ. ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಅರ್ಜಿ ಫಾರಂಗಳನ್ನು ಮುದ್ರಸಿ ಹಂಚಲಾಗುತ್ತಿದೆ. ಭರ್ತಿ ಮಾಡಿದ ಅರ್ಜಿಗಳನ್ನು ವಿದ್ಯಾರ್ಥಿಗಳಿಂದ ಪಡೆದು ಸಂಬಂಧಿಸಿದ ಇಲಾಖೆಗೆ ಸಲ್ಲಿಸಿ ಮುಂದಿನ ಅನುಪಾಲನೆಯನ್ನು ಟಿಆರ್‌ಎಫ್ ಮಾಡುತ್ತಿದೆ. ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸುವಲ್ಲಿ ಟಿಆರ್‌ಎಫ್‌ನ ಸೇವೆ ಅನನ್ಯ. ಸರಕಾರದಿಂದ ಹಾಗೂ ಖಾಸಗಿ ಸಂಸ್ಥೆಗಳಿಂದ ಕೋಟ್ಯಾಂತರ ರೂ ಗಳ ವಿದ್ಯಾರ್ಥಿವೇತನ ಇಂದು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಹರಿದು ಬರಲು ಜಿಲ್ಲೆಯ ಹಲವು ಸಂಘಟನೆಗಳು ಸಾಂಘಿಕವಾಗಿ ಪ್ರಯತ್ನಿಸುತ್�

Writer - ರಫೀಕ್ ಮಾಸ್ಟರ್

contributor

Editor - ರಫೀಕ್ ಮಾಸ್ಟರ್

contributor

Similar News