ಉರುಗ್ವೆ ಸ್ಟಾರ್ ಸುಯರೆಝ್‌ಗೆ 2 ಪಂದ್ಯಗಳಿಗೆ ನಿಷೇಧ

Update: 2016-01-13 18:40 GMT

ಬಾರ್ಸಿಲೋನಾ, ಜ.13: ಎಸ್ಪಾನ್ಯೋಲ್ ತಂಡದ ಆಟಗಾರನನ್ನು ನಿಂದಿಸಿದ ಆರೋಪದಲ್ಲಿ ಬಾರ್ಸಿಲೋನಾ ತಂಡದ ಮುನ್ಪಡೆ ಆಟಗಾರ ಉರುಗ್ವೆಯ ಲೂಯಿಸ್ ಸುಯರೆಝ್‌ಗೆ ಎರಡು ಪಂದ್ಯಗಳಿಗೆ ನಿಷೇಧ ವಿಧಿಸಲಾಗಿದೆ.
ಜ.5ರಂದು ಕೊಪಾ ಡೆಲ್ ರೇ ಲೀಗ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಕ್ಯಾಟಲಾನ್ ಸಿಟಿ ತಂಡದಲ್ಲಿರುವ ಎಸ್ಪಾನ್ಯೋಲ್‌ನ ಆಟಗಾರರನ್ನು ನಿಂದಿಸಿದ ಆರೋಪ ಎದುರಿಸುತ್ತಿದ್ದರು.
ಬಾರ್ಸಿಲೋನಾ ಈ ಪಂದ್ಯದಲ್ಲಿ 4-1 ಅಂತರದಲ್ಲಿ ಜಯ ಗಳಿಸಿತ್ತು.
ಇದೇ ವೇಳೆ ಎಸ್ಪಾನ್ಯೋಲ್ ತಂಡದ ಇಬ್ಬರು ಆಟಗಾರರು ನಿಷೇಧದಿಂದ ಪಾರಾಗಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News