×
Ad

ಇಂಗ್ಲೆಂಡ್, ಬಾಂಗ್ಲಾ, ದಕ್ಷಿಣ ಆಫ್ರಿಕ ವಿರುದ್ಧ 7 ಟೆಸ್ಟ್ ಪಂದ್ಯಗಳನ್ನು ಆಡಲಿರುವ ಪಾಕಿಸ್ತಾನ

Update: 2024-05-03 22:25 IST

PC : NDTV 

ಲಾಹೋರ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ)ನ ಮೂರನೇ ಆವೃತ್ತಿಯ ಭಾಗವಾಗಿ ಪಾಕಿಸ್ತಾನವು 2024 ಆಗಸ್ಟ್ನಿಂದ 2025 ಜನವರಿವರೆಗೆ ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕ ವಿರುದ್ಧ ಒಟ್ಟು ಏಳು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಹಾಲಿ ಆವೃತ್ತಿಯು ಮುಂದಿನ ವರ್ಷ ಸಮಾಪನಗೊಳ್ಳಲಿದೆ.

ಮೊದಲು ಪಾಕಿಸ್ತಾನವು ಇಂಗ್ಲೆಂಡ್ ಮತ್ತು ಬಾಂಗ್ಲಾದೇಶಗಳ ವಿರುದ್ಧದ ಟೆಸ್ಟ್ ಸರಣಿಗೆ ಆತಿಥ್ಯ ವಹಿಸಲಿದೆ. ಇಂಗ್ಲೆಂಡ್ ಮತ್ತು ಬಾಂಗ್ಲಾದೇಶಗಳ ವಿರುದ್ಧ ಅದು ಕ್ರಮವಾಗಿ ಎರಡು ಮತ್ತು ಮೂರು ಟೆಸ್ಟ್ಗಳನ್ನು ಆಡಲಿದೆ. ಬಳಿಕ, ಈ ವರ್ಷದ ಉತ್ತರಾರ್ಧದಲ್ಲಿ ಪಾಕಿಸ್ತಾನವು ದಕ್ಷಿಣ ಆಫ್ರಿಕ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಮೂರು ಟಿ20 ಪಂದ್ಯಗಳು, ಮೂರು ಏಕದಿನ ಪಂದ್ಯಗಳು ಮತ್ತು ಎರಡು ಟೆಸ್ಟ್ಗಳನ್ನು ಆಡಲಿದೆ. ಪಾಕಿಸ್ತಾನ ಈವರೆಗೆ ದಕ್ಷಿಣ ಆಫ್ರಿಕ ಮತ್ತು ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿಯೊಂದನ್ನು ಜಯಿಸಿಲ್ಲ.

ಈ ವಿಷಯವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಶುಕ್ರವಾರ ಪ್ರಕಟಿಸಿದೆ.

ಪಾಕಿಸ್ತಾನವು ಮುಂದಿನ ವರ್ಷ ದಕ್ಷಿಣ ಆಫ್ರಿಕ ಮತ್ತು ನ್ಯೂಝಿಲ್ಯಾಂಡ್ಗಳನ್ನೊಳಗೊಂಡ ತ್ರಿಕೋನ ಏಕದಿನ ಸರಣಿಯೊಂದನ್ನೂ ಆಯೋಜಿಸಲಿದೆ. ಬಳಿಕ, ಅದು ಎಂಟು ತಂಡಗಳ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಆತಿಥ್ಯ ವಹಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News