×
Ad

ಮತದಾನ ಪ್ರಜೆಗಳ ವಿಶೇಷ ಅಧಿಕಾರ: ಜಿಲ್ಲಾಧಿಕಾರಿ ಕುಸುಗಲ್

Update: 2016-01-25 23:46 IST

ಹಾಸನ: ರಾಷ್ಟ್ರೀಯ ಮತದಾರರ ದಿನಾಚರಣೆ

ಹಾಸನ, ಜ.25: ದೇಶದಲ್ಲಿ ಮತದಾನವೆಂಬುದು ಮತದಾರರ ಒಂದು ಶಕ್ತಿಯಾಗಿದೆ ಎಂದು ಜಿಲ್ಲಾಧಿಕಾರಿ ಉಮೇಶ್ ಎಚ್. ಕುಸುಗಲ್ ಅಭಿಪಾಯಪಟ್ಟಿದ್ದಾರೆ.

ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮತದಾನದ ಹಕ್ಕು ಪಡೆದಿರುವವರು ಮತ ಹಾಕುವುದರ ಮೂಲಕ ಉತ್ತಮ ನಾಯಕರನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡಲಾಗಿದೆ ಎಂದರು.
   ಇತರೆ ರಾಷ್ಟ್ರಗಳಲ್ಲಿ ಭಾರತೀಯ ಮತದಾರನಿಗೆ ಇರುವಷ್ಟು ಹಕ್ಕು ನೀಡಿಲ್ಲ. ಭಾರತದಲ್ಲ್ಲಿ ಮತದಾನ ಪ್ರಜೆಗಳ ವಿಶೇಷ ಶಕ್ತಿಯಾಗಿದ್ದು, ನಮ್ಮೆಲ್ಲ್ಲರ ಸೌಭಾಗ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಯಾವುದೇ ಚುನಾವಣೆ ಬಂದರೂ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಬೇಕು. ಇದಕ್ಕೂ ಮೊದಲು ಪ್ರತಿಯೊಬ್ಬರೂ ಶಿಕ್ಷಣ ಪಡೆಯುವುದರ ಮೂಲಕ ಚುನಾವಣೆಯ ಅರ್ಥ ತಿಳಿದು ಸಮಸ್ಯೆಗೆ ಸ್ಪಂದಿಸುವ ನಾಯಕನನ್ನು ತರಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಪಂ ಉಪಕಾರ್ಯದರ್ಶಿ ಕರಿಯಪ್ಪ, ಪ್ರತಿಯೊಬ್ಬರೂ 18 ವರ್ಷ ತುಂಬಿದ ಮೇಲೆ ಚುನಾವಣೆಯಲ್ಲಿ ಮತ ಹಾಕಲು ನಿಗದಿತ ಸಮಯದಲ್ಲಿ ಗುರುತಿನ ಚೀಟಿ ಪಡೆಯಬೇಕು. ನೂರಕ್ಕೆ ನೂರರಷ್ಟು ಶೇಕಡ ಮತದಾನ ಮಾಡಿದಾಗ ಮಾತ್ರ ಸಮರ್ಪಕ ಜನ ಪ್ರತಿನಿಧಿಯನ್ನು ಆಯ್ಕೆ ಮಾಡಲು ಸಾಧ್ಯ ಎಂದರು.
ಅಪರ ಜಿಲ್ಲಾ ಪೊಲೀಸ್ ಅಧಿಕಾರಿ ಶೋಭಾರಾಣಿ ಮಾತನಾಡಿ, ಜನರ ಕಷ್ಟ ಅರ್ಥ ಮಾಡಿಕೊಂಡು ಕೆಲಸ ಮಾಡುವ ನಾಯಕರನ್ನು ಮತದಾರರರು ಆಯ್ಕೆ ಮಾಡಬೇಕು.
  ಮತಕ್ಕಾಗಿ ಒಡ್ಡುವ ಆಸೆ, ಆಮಿಷಗಳಿಗೆ ತಲೆ ಕೆಡಿಸಿಕೊಳ್ಳಬಾರದು. ಪ್ರಸಕ್ತ ಸಾಲಿನ ತಾಪಂ- ಜಿಪಂ ಚುನಾವಣೆ ಸಮೀಪದಲ್ಲಿದ್ದು, ಯಾರೂ ವಂಚಿತರಾಗದೆ ಮತ ಹಾಕುವಂತೆ ಕರೆ ನೀಡಿದರು.
 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರಿಗೆ ಮತದಾರರ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಚುನಾವಣೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳನ್ನು ಅಭಿನಂದಿಸಿ ಪ್ರಸಂಶೆ ಪತ್ರ ನೀಡಲಾಯಿತು. ಚರ್ಚಾ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹಾಗೂ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡವರಿಗೆ ಗುರುತಿನ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲ್ಲಿ ತಹಶೀಲ್ದಾರ್ ಮಂಜುನಾಥ್, ಅಪರ ಜಿಲ್ಲಾಧಿಕಾರಿ ಜಾನಕಿ, ರಂಜಿತಾ, ವಾರ್ತಾಧಿಕಾರಿ ವಿನೋದ್ ಚಂದ್ರ, ಬಾಲಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News