ಬೆಂಗಳೂರು;ಹೆತ್ತ ಮಕ್ಕಳು,ಮೊಮ್ಮಕ್ಕಳು,ವೃದ್ಧ ಹೆತ್ತವರನ್ನು ಆಸ್ತಿಗಾಗಿ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ
ಬೆಂಗಳೂರು,ಜ.31- ವಿಜಯನಗರದಲ್ಲಿ ವೃದ್ಧಾಪ್ಯದಲ್ಲಿ ಊರುಗೋಲಾಗಬೇಕಾಗಿದ್ದ ಹೆತ್ತ ಮಕ್ಕಳು ಮೊಮ್ಮಕ್ಕಳು ನಯವಂಚಕತನದಿಂದ ವೃದ್ಧ ಹೆತ್ತವರನ್ನು ಆಸ್ತಿಗಾಗಿ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ನಡೆದಿದೆ.
ತಮ್ಮ ಮಕ್ಕಳು ವೃದ್ಧಾಪ್ಯದಲ್ಲಿ ತಮಗೆ ಆಸರೆಯಾಗಿರುತ್ತಾರೆ ಎನ್ನುವ ಆಸೆ ಇಟ್ಟುಕೊಂಡಿದ್ದ ಹೊರಹಾಕಿದ ವೃದ್ಧ ತಿಮ್ಮಯ್ಯ ಹಾಗೂ ಅಕ್ಕಯಮ್ಮ ದಂಪತಿ ಇದೀಗ ಮನೆಯ ಮುಂದೆ ಗಂಟು ಮೂಟೆ ಇಟ್ಟಿಕೊಂಡು ಅಳುತ್ತಾ ಕುಳಿತ್ತಿದ್ದಾರೆ.
ತಿಮ್ಮಯ್ಯ ಹಾಗೂ ಅಕ್ಕಯಮ್ಮ ಅವರಿಗೆ ಮೂರು ಗಂಡು ಮಕ್ಕಳು. ಅದಾಗಲೇ ಇವರಿಂದ ಎಲ್ಲ ಮಕ್ಕಳು ದೂರವಾಗಿದ್ದಾರೆ. ಇನ್ನು ತಾವು ವಾಸವಾಗಿದ್ದ ಮನೆಯ ಅರ್ದಭಾಗವನ್ನು ಹಿರಿಯ ಮಗನ ಮಗಳಾದ ವೆಂಕಟಲಕ್ಷ್ಮೀಗೆ ಬರೆದುಕೊಟ್ಟಿದ್ದರು. ಆದರೆ ಮೊಮ್ಮಗಳ ದುರಾಸೆಯಿಂದ ಎಲ್ಲ ಮನೆಯನ್ನು ತನ್ನ ಹೆಸರಿಗೆ ಬರೆಸಿಕೊಂಡು ಅಜ್ಜ ಅಜ್ಜಿಯನ್ನು ಮನೆಯಿಂದ ಹೊರಗೆ ಹಾಕಿದ್ದಾಳೆ.
ಮೊಮ್ಮಗಳು ಮಾಡಿದ ಮೊಸದಿಂದಾಗಿ ಮನೆ ಮಠವನ್ನು ಕಳೆದುಕೊಂಡ ಇವರು ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ನಗರದ ಎಸಿ ನ್ಯಾಯಾಲಯ ಮನೆಯನ್ನು ಇವರಿಗೆ ನೀಡುವಂತೆ ಆದೇಶ ಮಾಡಿದೆ. ಆದರೆ ಮೊಮ್ಮಗಳು ಮತ್ತು ಆಕೆಯ ಪತಿ ಹೈಕೋರ್ಟ್ ಮೊರೆ ಹೊಗಿದ್ದಾರೆ. ಆದರೆ ಅಲ್ಲಿಯೂ ಅಜ್ಜ ಅಜ್ಜಿಗೆ ಗೆಲುವಾಗಿದೆ. ಹೀಗಿದ್ದರೂ ಇವರಿಗೆ ವಾಸಮಾಡಲು ಮನೆ ಇದೂವರೆಗೆ ಸಿಕ್ಕಿಲ್ಲ. ಇನ್ನು ಸ್ಥಳೀಯ ಪೊಲೀಸರು ಸಹಾಯ ಕೇಳಿದರೆ ಇವರ ಸಹಾಯಕ್ಕೆ ಪೊಲೀಸರು ಬಂದಿಲ್ಲ ಎನ್ನುವುದು ಇವರ ಆರೋಪವಾಗಿದೆ.ಒಟ್ಟಿನಲ್ಲಿ ಇಳಿವಯಸ್ಸಿನಲ್ಲಿ ಆಸರೆ ಆಗಬೇಕಿದ್ದವರೇ ಇವರ ಪಾಲಿಗೆ ಇಲ್ಲದಂತ್ತಾಗಿ ಅನಾಥರಾಗಿರುವುದು ದುರಂತವೇ ಸರಿ.!