×
Ad

ಬೆಂಗಳೂರು;ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಗೆ 5 ವರ್ಷಗಳ ಕಠಿಣ ಸಜೆ ಹಾಗೂ 50 ಸಾವಿರ ರೂಗಳ ದಂಡ

Update: 2016-01-31 19:56 IST

ಬೆಂಗಳೂರು,ಜ.31-ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿ 5 ವರ್ಷಗಳ ಕಠಿಣ ಸಜೆ ಹಾಗೂ 50 ಸಾವಿರ ರೂಗಳ ದಂಡವನ್ನು ನಗರದ ಸಿಸಿಹೆಚ್ 55 ನೇ ನ್ಯಾಯಾಲಯವು ವಿಧಿಸಿ ವಿಧಿಸಿ ತೀರ್ಪು ನೀಡಿದೆ.


ನಾಗಶೆಟ್ಟಿಹಳ್ಳಿಯ ಮುನೀಂದ್ರ(23) ಶಿಕ್ಷೆಗೊಳಗಾಗಿರುವ ಅಪರಾಧಿಯಾಗಿದ್ದಾನೆ,ಸಂಜಯನಗರದಲ್ಲಿ ಕಳೆದ ಅಕ್ಟೋಬರ್ 1 ರಂದು ಬೆಳಿಗ್ಗೆ 9 ರವೇಳೆ ಮನೆಯ ಮುಂದೆ ಆಟವಾಡುತ್ತಿದ್ದ 8 ವರ್ಷದ ಅಪ್ರಾಪ್ತ ಬಾಲಕಿಗೆ ತಿಂಡಿ ಕೊಡುವ ನೆಪದಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಯಾರಿಗಾದರೂ ಹೇಳಿದರೆ ಕೊಲೆಮಾಡುವುದಾಗಿ ಶಿಕ್ಷಿತನು ಬೆದರಿಕೆ ಹಾಕಿದ್ದನು.


ಈ ಸಂಬಂಧ ದೂರು ದಾಖಲಿಸಿಕೊಂಡ ಸಂಜಯನಗರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ದೋಷರೋಪಣ ಪಟ್ಟಿ ಸಲ್ಲಿಸಿದ್ದರು ಪ್ರಕರಣದ ವಿಚಾರಣೆ ನಡೆಸಿದ ಸಿಸಿಹೆಚ್ 55 ನೇ ನ್ಯಾಯಾಲಯ ನ್ಯಾಯಾಧೀಶರು ಸರ್ಕಾರಿ ಅಭಿಯೋಜಕರು ಮಂಡಿಸಿದ ವಾದವನ್ನು ಆಲಿಸಿ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿ 5 ವರ್ಷ ಕಠಿಣ ಸಜೆ ಹಾಗೂ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News