ಟಾಟಾ ಮೋಟಾರ್ಸ್ ಪಾಲಿಗೆ ತಲೆನೋವಾದ ಝೀಕಾ ವೈರಸ್ !

Update: 2016-02-02 10:43 GMT

ಹೊಸದಿಲ್ಲಿ , ಫೆ. 2 : ಟಾಟಾ ಮೋಟರ್ಸ್ ಸಂಸ್ಥೆ ತನ್ನ ನೂತನ ಹ್ಯಾಚ್ ಬ್ಯಾಕ್ ಕಾರಿನ ಹೆಸರನ್ನು ಕೊನೆ ಗಳಿಗೆಯಲ್ಲಿ ಬದಲಾಯಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದೆ. ಇದಕ್ಕೆ ಕಾರಣ ಮಾತ್ರ ಅತ್ಯಂತ ವಿಚಿತ್ರವಾಗಿದೆ. ವಿಶ್ವವ್ಯಾಪಿ ಭಯ ಸೃಷ್ಟಿಸಿರುವ ಝೀಕಾ ವೈರಸ್ ಇದಕ್ಕೆ ಕಾರಣ ! ಟಾಟಾ ನೂತನ ಕಾರಿಗೆ ಝೀಕಾ ಎಂದು ಹೆಸರಿಡಲಾಗಿತ್ತು. ಆದರೆ ಈಗ ಅದೇ ಹೆಸರಿನ ವೈರಸ್ ಎಲ್ಲರ ನೆಮ್ಮದಿ ಹಾಳು ಮಾಡಿದ್ದು , ಟಾಟಾ ತಲೆನೋವಿಗೆ ಕಾರಣವಾಗಿದೆ. 

ಟಾಟಾ ಇತ್ತೀಚಿಗೆ ತನ್ನ ನೂತನ ಸಣ್ಣ ಕಾರು ಝೀಕಾವನ್ನು ತನ್ನ ನೂತನ ಬ್ರ್ಯಾಂಡ್ ಅಂಬಾಸಿಡರ್ ಲಯೋನೆಲ್ ಮೆಸ್ಸಿ ಹೆಸರು ಬಳಸಿಕೊಂಡು ಭಾರಿ ಪ್ರಚಾರ ನಡೆಸಿತ್ತು. ಆದರೆ ಕಾರು ಮಾರುಕಟ್ಟೆಗೆ ಬಿಡುಗಡೆಯಾಗುವ ಸಮಯಕ್ಕೆ ಸರಿಯಾಗಿ ಝೀಕಾ ವೈರಸ್ ತಲೆಯೆತ್ತಿದ್ದು ಕಂಪೆನಿ ಪಾಲಿಗೆ ಮುಳುವಾಗಿದೆ. 

" ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ . ಈವರೆಗೆ ನಾವು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ " ಎಂದು ಕಂಪೆನಿಯ ಕಾರ್ಪೊರೇಟ್ ಸಂವಹನ ಮುಖ್ಯಸ್ಥ ಮಿನಾರಿ ಶಾಹ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News