×
Ad

ಬೆಂಗಳೂರು: ಒಟ್ಟು 3,500 ಕೋಟಿ ರೂಪಾಯಿ ಮೊತ್ತದ ಯೋಜನೆಗಳ ತಿಳವಳಿಕೆ ಒಪ್ಪಂದಗಳಿಗೆ ಸಹಿ

Update: 2016-02-04 18:09 IST

 ಬೆಂಗಳೂರು,ಫೆ.4: ಕೃಷಿ ನಂತರ ಅತಿ ಹೆಚ್ಚು ಉದ್ಯೋಗವಕಾಶ ಒದಗಿಸಿರುವ ಜವಳಿ ಕ್ಷೇತ್ರದತ್ತ ಉದ್ಯಮಿಗಳು ಆಸಕ್ತಿ ತೋರಿದ್ದು, ಇಂದು ಒಟ್ಟು 3,500 ಕೋಟಿ ರೂಪಾಯಿ ಮೊತ್ತದ ಯೋಜನೆಗಳ ತಿಳವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಜವಳಿ ವಲಯದಲ್ಲಿ ಹೂಡಿಕೆಗೆ ಹೆಚ್ಚಿನ ಪ್ರಾದಾನ್ಯತೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆಗೆ ಉದ್ಯಮಿಗಳು ಆಸಕ್ತರಾಗಿದ್ದಾರೆ. ಇಲ್ಲಿನ ಬೌಗೋಳಿಕ ಪರಿಸ್ಥಿತಿ, ರೇಷ್ಮೆ, ಹತ್ತಿ, ಉಣ್ಣೆ ಉತ್ಪಾದನೆಯಾಗುವ ಕರ್ನಾಟಕ ಜವಳಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿದೆ. ಇಲ್ಲಿನ ಮಾನವ ಸಂಪನ್ಮೂಲ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಕೈಗಾರಿಕೋದ್ಯಮಿಗಳು ಸಂತಸ ವ್ಯಕ್ತಪಡಿಸಿದರು.

ಕರ್ನಾಟಕ ಜವಳಿ ಅಭಿವೃದ್ಧಿ ಆಯುಕ್ತ ಡಾ: ರಾಜು ಮತ್ತು ವಿವಿಧ ಜವಳಿ ಉದ್ಯಮಿಗಳು ಬಂಡವಾಳ ಹೂಡಿಕೆ ಸಂಬಂಧ ತಿಳವಳಿಕೆ ಪತ್ರಗಳಿಗೆ ಸಹಿ ಹಾಕಿದರು. ಮುಂಬಯಿ ಮೂಲದ ಹಿಟ್ಕೋ ಕಂಪೆನಿ ಈಗಾಗಲೇ ರಾಜ್ಯದಲ್ಲಿ 400 ಕೋಟಿ ರೂ ಹೂಡಿಕೆ ಮಾಡಿದ್ದು, ವಿಜಯಪುರದಲ್ಲಿ ಡೆನಿಮ್ ಬ್ರಾಂಡ್ ಬಟ್ಟೆ ಉತ್ಪಾದಿಸುವ ಡೆನಿಮ್ ಟೆಕ್ಸ್ ಟೈಲ್ ಪಾರ್ಕ್ ಅಭಿವೃದ್ಧಿಪಡಿಸಲು 150 ಕೋಟಿ ರೂ ಹೂಡಿಕೆ ಮಾಡುತ್ತಿದೆ. ಸಂಸ್ಥೆಯ ಮುಖ್ಯಸ್ತ ವಿಜಯ್ ಕುಮಾರ್ ನಿರಾಣಿ ಒಪ್ಪಂದಕ್ಕೆ ಸಹಿ ಹಾಕಿದರು. ಪುಣ್ಯ ಟೆಕ್ಸ್ ಟೈಲ್ಸ್ ಪಾರ್ಕ್‌ನಿಂದ 100 ಕೋಟಿ ರೂ, ಹೂಡಿಕೆಯಾಗುತ್ತಿದ್ದು, ಬೆಳಗಾವಿಯ ನಿಪ್ಪಾಣಿಯಲ್ಲಿ ತನ್ನ ಕಾರ್ಖಾನೆ ತೆರೆಯಲಿದೆ. ಯಾದಗಿರಿಯಲ್ಲಿ ಕಾರ್ಟರ್ ಸ್ಪಿನ್ನಿಂಗ್ ಸಂಸ್ಥೆ 100 ಕೋಟಿ ರೂ. ಬಂಡವಾಳ ತೊಡಗಿಸುಗತ್ತಿದ್ದು, ರಾಜೇಶ್ ಸ್ಪಿ್ನರ್ಸ್‌ ಶಿಗ್ಗಾಂವ್‌ನಲ್ಲಿ 25 ಕೋಟಿ ರೂ. ಮತ್ತು ಶ್ರೀನಿವಾಸಪುರದಲ್ಲಿ ಅಮರನಾರಾಯಣ ಟೆಕ್ಸ್‌ಟೈಲ್ಸ್ ಕಂಪೆನಿ 120 ಕೋಟಿ ರೂ,ಹೂಡಿಕೆ ಮಾ

ಡುವ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಜಾಕಿ ಉತ್ಪನ್ನಗಳನ್ನು ಉತ್ಪಾದಿಸುವ ಪೇಜ್ ಇಂಡಸ್ಟ್ರೀ ರಾಜ್ಯದಲ್ಲಿ 18 ಘಟಕಗಳು ಈಗಾಗಲೇ ತೆರೆದಿದ್ದು, ಶೀಘ್ರದಲ್ಲೇ ಮತ್ತೆ ಹೊಸದಾಗಿ 3 ಘಟಕಗಳನ್ನು ತೆರೆಯುವುದಾಗಿ ಘೋಷಿಸಿತು. ಜವಳಿ ಅಭಿವೃದ್ಧಿ ಇಲಾಖೆಯ ಆಯುಕ್ತ ಡಾ.ಆರ್.ರಾಜು ಮಾತನಾಡಿ, 2008-13 ರ ಜವಳಿ ನೀತಿಯಲ್ಲಿ ಒಟ್ಟು 5500 ಕೋಟಿ ರೂ ಹೂಡಿಕೆಂಾಗಿ 2.50 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. 2013-18 ರ ನೀತಿಯಡಿ ಇಲ್ಲಿಯವರೆಗೆ 2000 ಕೋಟಿ ರೂ. ಹೂಡಿಕೆಯಾಗಿದ್ದು 1 ಲಕ್ಷ ಉದ್ಯೋಗ ಸೃಷ್ಠಿಯಾಗಿದೆ ಎಂದರು.

ಯಾದಗಿರಿಯಲ್ಲಿ ಬೃಹತ್ ಜವಳಿ ಪಾರ್ಕ್ ಅಭಿವೃದ್ಧಿಪಡಿಸುತ್ತಿದ್ದು, ಇದಕ್ಕಾಗಿ 1000 ಎಕರೆ ಭೂಮಿ ಗುರುತಿಸಲಾಗಿದೆ. ಜವಳಿ ಉದ್ಯಮದ ಅಭ್ಯುದಕ್ಕಾಗಿ ಬಳ್ಳಾರಿಯಲ್ಲಿ 800, ತುಮಕೂರಿನ ಶಿರಾದಲ್ಲಿ 500, ಮೈಸೂರು ಚಾಮರಾಜನಗರರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಭೂಮಿಯನ್ನು ಜವಳಿ ಉದ್ಯಮಕ್ಕೆ ಮೀಸಲಿಡಲಾಗಿದೆ. ಉದ್ಯಮದ ಎಲ್ಲಾ ಪ್ರಸ್ತಾವನೆಗೆ ಹೋಸ ನೀತಿ ಅನ್ವಯ ಕಾಲಮಿತಿ ಒಳಗೆ ಒಪ್ಪಿಗೆ ಸೂಚಿಸಲಾಗುವುದು ಎಂದರು.

ರಾಜ್ಯದಲ್ಲಿ ಪ್ರತಿವಷ್ 8,500 ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯಾಗುತ್ತಿದ್ದು, ಇಡೀ ದೇಶದ ಒಟ್ಟಾರೆ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ 65 ರಷ್ಟಿದೆ. ಅತಿ ಹೆಚ್ಚು ಹತ್ತಿ ಮತ್ತು ಸಮರ್ಪಕ ಪ್ರಮಾಣದಲ್ಲಿ ಉಣ್ಣೆ ಉತ್ಪಾದಿಸುವ ರಾಜ್ಯ ಕರ್ನಾಟಕವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News