ಬೆಂಗಳೂರು: ತಾಂಝನಿಯ ಮಹಿಳೆ ಮೇಲೆ ಹಲ್ಲೆ ಪ್ರಕರಣದಲ್ಲಿ ಬಿಜೆಪಿ ಸದಸ್ಯ ಪ್ರಮುಖ ಆರೋಪಿ
ಬೆಂಗಳೂರು , ಫೆ . ೫ :ಇತ್ತೀಚಿಗೆ ಬೆಂಗಳೂರಿನಲ್ಲಿ ತಾಂಝಾನಿಯ ಮಹಿಳೆಯನ್ನು ಮೇಲೆ ಅನಾಗರೀಕವಾಗಿ ಹಲ್ಲೆ ಮಾಡಿ ಮೆರವಣಿಗೆ ಮಾಡಿದ ಪ್ರಕರಣದಲ್ಲಿ ಬಿಜೆಪಿ ಸದಸ್ಯನೊಬ್ಬ ಪ್ರಮುಖ ಆರೋಪಿ ಎಂದು ಹಿಂದುಸ್ಥಾನ್ ಟೈಮ್ಸ್ ವರದಿಯಲ್ಲಿ ತಿಳಿಸಿದೆ.
ಚಿಕ್ಕಬಾಣಾವರ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಬಂಗಾರಿ ಬಿಜೆಪಿ ಸದಸ್ಯನಾಗಿದ್ದು ಐದು ಆರೋಪಿಗಳಲ್ಲಿ ಒಬ್ಬ ಎಂದು ಗುರುತಿಸಲಾಗಿದೆ. " ಆತನ ಗುರುತು ಚೀಟಿ ದಾಳಿ ನಡೆದ ಸ್ಥಳದಲ್ಲಿ ಪತ್ತೆಯಾಗಿತ್ತು. ಆದರೆ ಆತ ನಿರಪರಾಧಿ. ಅಲ್ಲಿಂದ ಹೋಗುತ್ತಿದ್ದ ಆತ ನಿಜವಾಗಿ ಸಂತ್ರಸ್ಥರಿಗೆ ಸಹಾಯ ಮಾಡಲು ಬಯಸಿದ್ದ . ಆದರೆ ಜನರು ಬಹಳ ಸಿಟ್ಟಲ್ಲಿದ್ದರಿಂದ ಆತನಿಗೆ ಅವರನ್ನು ತಡೆಯಲು ಸಾಧ್ಯವಾಗಲಿಲ್ಲ. ಆ ಗಡಿಬಿಡಿಯಲ್ಲಿ ತನ್ನ ಗುರುತಿನ ಚೀಟಿ ಕಳಕೊಂಡಿದ್ದಾನೆ " ಎಂದು ಅದೇ ಪಂಚಾಯತ್ ನ ಇನ್ನೊಂದು ಸದಸ್ಯ ಕಬೀರ್ ಅಹ್ಮದ್ ಹೇಳಿದ್ದಾರೆ.
ಇತರ ಬಂಧಿತರಾದ ವೆಂಕಟೇಶ್ ಸಲೀಂ ಪಾಶ , ಭಾನು ಪ್ರಕಾಶ್ ಹಾಗು ರಹ್ಮತುಲ್ಲಾಹ್ ಅವರು ಕನ್ನಡ ಪರ ಸಂಘಟನೆಯೊಂದಕ್ಕೆ ಸೇರಿದವರು ಎಂದು ಕಿರಿಯ ಪೋಲಿಸ್ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ.