ಟ್ವೆಂಟಿ-20ಗೆ ಸೈಮಂಡ್ಸ್ ವಾಪಸ್?

Update: 2016-02-09 18:33 GMT

ಸಿಡ್ನಿ, ಫೆ.9: ಆಸ್ಟ್ರೇಲಿಯದ ಮಾಜಿ ಆಲ್‌ರೌಂಡರ್ ಆ್ಯಂಡ್ರೂ ಸೈಮಂಡ್ಸ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮಾತ್ರ ಆಡುವ ಸಲುವಾಗಿ ಸಕ್ರಿಯ ಕ್ರಿಕೆಟ್‌ಗೆ ವಾಪಸಾಗಲಿದ್ದಾರೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿ ಮಾಡಿದೆ.

ಸೈಮಂಡ್ಸ್ ಕೌಟುಂಬಿಕ ಕಾರಣದಿಂದ 2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಪ್ರಸ್ತುತ ನಿವೃತ್ತ ಆಟಗಾರರಿಗೆ ಸೀಮಿತವಾಗಿರುವ ದುಬೈ ಮೂಲದ ಮಾಸ್ಟರ್ಸ್‌ ಚಾಂಪಿಯನ್ಸ್ ಲೀಗ್‌ನಲ್ಲಿ(ಎಂಸಿಎಲ್) ಕಾಪ್ರಿಕಾರ್ನ್ ಕಮಾಂಡರ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ನೀವು ಮತ್ತೊಮ್ಮೆ ಆಡುತ್ತೀರಾ ಎಂದು ಜನರು ತನ್ನಲ್ಲಿ ಪ್ರಶ್ನಿಸುತ್ತಿದ್ದಾರೆ. ತಾನು ಫಿಟ್ ಆದರೆ ಮತ್ತೊಮ್ಮೆ ಆಡುವ ಬಗ್ಗೆ ಯೋಚಿಸುತ್ತೇನೆ. ಇದೀಗ ತಾನು ಕ್ರಿಕೆಟ್ ಆಡುವುದನ್ನು ಆನಂದಿಸುತ್ತಿರುವೆ. ಈ ವಯಸ್ಸಿನಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ತನಗೆ ದೊಡ್ಡ ಸವಾಲು ಎಂದು ಸೈಮಂಡ್ಸ್ ಪ್ರತಿಕ್ರಿಯಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News