×
Ad

ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಮೆಂಟ್: ನಾಲ್ಕನೇ ಸುತ್ತಿಗೆ ನಡಾಲ್ ಪ್ರವೇಶ

Update: 2024-04-30 21:56 IST

ರಫೆಲ್ ನಡಾಲ್ | PC : PTI  

ಮ್ಯಾಡ್ರಿಡ್ : ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಮೆಂಟ್ನಲ್ಲಿ ಸ್ಪೇನ್ ಸೂಪರ್ಸ್ಟಾರ್ ರಫೆಲ್ ನಡಾಲ್ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಸೋಮವಾರ ಮೂರು ಗಂಟೆಗಳ ಕಾಲ ನಡೆದ ಪುರುಷರ ಸಿಂಗಲ್ಸ್ ನ ಮ್ಯಾರಥಾನ್ ಪಂದ್ಯದಲ್ಲಿ ನಡಾಲ್ ಅರ್ಜೆಂಟೀನದ ಪೆಡ್ರೊ ಕಚಿನ್ರನ್ನು 6-1, 6-7(5/7), 6-3 ಸೆಟ್ಗಳ ಅಂತರದಿಂದ ಮಣಿಸಿದರು.

ನಿವೃತ್ತಿಯ ಮೊದಲು ಇದು ತವರಿನಲ್ಲಿ ನಡಾಲ್ ಆಡುತ್ತಿರುವ ಕೊನೆಯ ಟೂರ್ನಮೆಂಟ್ ಆಗಿದೆ. ಐದು ಬಾರಿಯ ಚಾಂಪಿಯನ್ ನಡಾಲ್ ತನ್ನ ಹೋರಾಟಕಾರಿ ಆಟವನ್ನು ಮತ್ತೊಮ್ಮೆ ಪ್ರದರ್ಶಿಸಿದರು.

ಪಂದ್ಯದ ನಂತರ ನಡಾಲ್ ಅವರು ನೆಟ್ನಲ್ಲಿ ಕಚಿನ್ರೊಂದಿಗೆ ಆತ್ಮೀಯವಾಗಿ ಮಾತನಾಡಿದರು. ಮೆಚ್ಚುಗೆಯ ಸಂಕೇತವಾಗಿ ವಿಶ್ವದ ನಂ.91ನೇ ಆಟಗಾರನಿಗೆ ಅಂಗಿಯನ್ನು ಉಡುಗೊರೆಯಾಗಿ ನೀಡಿದರು.

ಅಂತಿಮ-16ರ ಸುತ್ತಿಗೆ ಪ್ರವೇಶಿಸಿರುವ ನಡಾಲ್ 30ನೇ ಶ್ರೇಯಾಂಕದ ಜಿರಿ ಲೆಹೆಕಾ ವಿರುದ್ದ ಸೆಣಸಾಡಲಿದ್ದಾರೆ.

2005ರ ಋತುವಿನಿಂದ ಆವೆಮಣ್ಣಿನ ಅಂಗಣದಲ್ಲಿ ನಡಾಲ್ ಪ್ರಾಬಲ್ಯ ಸಾಧಿಸುತ್ತಾ ಬಂದಿದ್ದು ಅಗ್ರ-50ರ ಹೊರಗಿನ ರ್ಯಾಂಕಿನ ಆಟಗಾರರ ವಿರುದ್ಧ ಆಡಿರುವ 163 ಪಂದ್ಯಗಳ ಪೈಕಿ ಕೇವಲ ಒಂದು ಬಾರಿ ಸೋತಿದ್ದಾರೆ.

29ರ ಹರೆಯದ ಕಚಿನ್ ಅವರು ನಡಾಲ್ ವಿರುದ್ಧ 18 ಬ್ರೇಕ್ಪಾಯಿಂಟ್ಸ್ನಲ್ಲಿ 9 ನ್ನು ಉಳಿಸಿದರು. ಈ ಮೂಲಕ 22 ಬಾರಿ ಗ್ರ್ಯಾನ್ಸ್ಲಾಮ್ ಚಾಂಪಿಯನ್ ನಡಾಲ್ಗೆ ಬೆವರಿಳಿಸುವಲ್ಲಿ ಶಕ್ತರಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News