ರಿಯಾದ್ ನಲ್ಲಿ 'ಗಲ್ಫ್ ಇಶಾರ' ಅಭಿಯಾನಕ್ಕೆ ಚಾಲನೆ

Update: 2016-02-10 12:23 GMT

     ರಿಯಾದ್: ಅನಿವಾಸಿ ಮುಸ್ಲಿಂ ಕನ್ನಡಿಗರಲ್ಲಿ ಧರ್ಮ, ಸಂಸ್ಕೃತಿ, ಸಾಹಿತ್ಯ ಹಾಗೂ ಸಂಸ್ಕಾರವನ್ನೊಳಗೊಂಡ ಓದಿನ ಅಭಿರುಚಿ ಬೆಳೆಸುವ ದೃಷ್ಟಿಯಿಂದ ಕರ್ನಾಟಕ ಕಲ್ಚರಲ್ ಫೌಂಡೇಶನ್(KCF) ಹಮ್ಮಿಕ್ಕೊಂಡ ತನ್ನ ಮುಖವಾಣಿ 'ಗಲ್ಫ್ ಇಶಾರ' ದ ಅಭಿಯಾನವು ಭರದಿಂದ ಸಾಗಿದೆ. ಜಿಸಿಸಿ ಮಟ್ಟದಲ್ಲಿ ಪತ್ರ್ರಿಕೆಯ ಪ್ರಸಾರ ಸಂಖ್ಯೆಯ ವೃದ್ಧಿ ಹಾಗೂ ಜನರಲ್ಲಿ ಸದಭಿರುಚಿಯ ಓದಿನ ಹವ್ಯಾಸವನ್ನು ಬೆಳೆಸಿ ಅವರನ್ನು ಚಲನಶೀಲ ಸಮೂಹವನ್ನಾಗಿ ಪರಿವರ್ತಿಸುವ ಗುರಿಯನ್ನು ಅಭಿಯಾನದ ಮೂಲಕ ಅದು ಹೊಂದಿದೆ.
  ಎಸ್ಎಸ್ಎಫ್ ಮುಖವಾಣಿ ಇಶಾರ ಪಾಕ್ಷಿಕದ ಸಹೋದರ ಆವೃತಿಯಾಗಿ ಕೇವಲ ಒಂದು ವರ್ಷದ ಹಿಂದಷ್ಟೇ ತನ್ನ ಪ್ರಕಟಣೆ ಆರಂಭಿಸಿದ 'ಗಲ್ಫ್ ಇಶಾರ' ಇದೀಗ ಸೌದಿ ಸೇರಿದಂತೆ ಜಿಸಿಸಿ ವಲಯದ ಯುಏಈ, ಬಹ್ರೈನ್,ಕುವೈಟ್ ಗಳಲ್ಲೂ ಭಾರೀ ಪ್ರಸಾರ ಗಿಟ್ಟಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಕತ್ತ ರ್, ಓಮಾನ್, ಮಲೇಶ್ಯ ಹಾಗೂ ಲಂಡನ್ ಗಳಿಗೂ ಪತ್ರಿಕೆಯ ಪ್ರಸಾರವನ್ನು ವಿಸ್ತರಿಸಲಾಗುವುದು.
    ಫೆಬ್ರವರಿ ಅಂತ್ಯಕ್ಕೆ ಕೊನೆಗೊಳ್ಳುವ ಅಭಿಯಾನ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸುವ ದೃಷ್ಟಿಯಿಂದ ಇತ್ತೀಚೆಗೆ ರಿಯಾದ್ ನಾದ್ಯಂತ 'ನಗರ ಸಂಚಾರ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಪಿ. ಯೂಸುಫ್ ಸಖಾಫಿ, ಪ್ರಾಂತೀಯ ಅಧ್ಯಕ್ಷ ನಝೀರ್ ಕಾಶಿಪಟ್ಣ,  ಕಾರ್ಯದರ್ಶಿ ಫಾರೂಕ್ ಉಳ್ಳಾಲ್, ಸಾಂತ್ವನ ವಿಭಾಗದ ಸಲೀಂ ಕನ್ಯಾಡಿ, ಒಲಯ್ಯ ಸೆಕ್ಟರ್ ನ ಇಬ್ರಾಹೀಂ ಕೊಂತೂರು, ಅಬ್ದುರ್ರಶೀದ್ ಮದನಿ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಸಂಚಾರಕ್ಕೆ ಕನ್ನಡಿಗರಿಂದ ಭಾರೀ ಮನ್ನ ಣೆ ವ್ಯಕ್ತ ವಾಗಿದ್ದು, ನೂರಾರು ಸಂಖ್ಯೆಯಲ್ಲಿ ಯುವಕರು 'ಗಲ್ಫ್ ಇಶಾರ' ದ ಚಂದಾದಾರರಾಗಿ ಸೇರಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News