ತೈವಾನ್ ಭೂಕಂಪ: ಸಾವಿನ ಸಂಖ್ಯೆ 109ಕ್ಕೆ

Update: 2016-02-13 14:29 GMT

ತೈಪೆ (ತೈವಾನ್), ಫೆ. 13: ತೈವಾನ್‌ನ ಅತ್ಯಂತ ಹಳೆಯ ನಗರ ತೈನಾನ್‌ನಲ್ಲಿ ಒಂದು ವಾರದ ಹಿಂದೆ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 109ಕ್ಕೇರಿದೆ ಹಾಗೂ ಕನಿಷ್ಠ ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ.
ಕುಸಿದ 17 ಮಹಡಿಯ ವೆಯುಗುವನ್ ಗೋಲ್ಡನ್ ಡ್ರಾಗನ್ ವಸತಿ ಸಂಕೀರ್ಣದ ಅವಶೇಷಗಳಡಿಯಿಂದ ಇಬ್ಬರನ್ನು ಹೊರತುಪಡಿಸಿ ಎಲ್ಲರನ್ನೂ ಹೊರಗೆ ತೆಗೆಯಲಾಗಿದೆ ಎಂದು ತೈವಾನ್‌ನ ಆಂತರಿಕ ಸಚಿವಾಲಯ ಶನಿವಾರ ಬೆಳಗ್ಗೆ ತಿಳಿಸಿದೆ.
ಕನಿಷ್ಠ ಒಂಬತ್ತು ಮಂದಿ ನಾಪತ್ತೆಯಾಗಿದ್ದು, ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರಬಹುದು ಎಂದು ಭಾವಿಸಲಾಗಿದೆ.
ನಿರ್ಲಕ್ಷದಿಂದಾಗಿ ಸಾವಿಗೆ ಕಾರಣವಾದ ಆರೋಪದಲ್ಲಿ ಕಟ್ಟಡದ ನಿರ್ಮಾಣಕಾರನನ್ನು ಪೊಲೀಸರು ಈ ವಾರ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News