ಅಂಧ ಮುಸ್ಲಿಂ ಬಾಲಕಿಗೆ ಗೀತೆ ಕಂಠಪಾಠ

Update: 2016-02-16 04:27 GMT

ಮೀರಠ್: ಏಳು ವರ್ಷದ ಅಂಧ ಬಾಲಕಿ ರಿದಾ ಝೊಹರಳನ್ನು ಭಗವದ್ಗೀತೆ ಬಗೆಗೆ ಗೊತ್ತೇ ಎಂದು ಕೇಳಿದರೆ ಕ್ಷಣ ಕೈಮುಗಿದುಕೊಂಡು ಕಂಠಸ್ಥವಾದ ಭಗವದ್ಗೀತೆಯ ಶ್ಲೋಕಗಳನ್ನು ಸ್ಪಷ್ಟವಾಗಿ ಹೇಳುತ್ತಾ ಹೋಗುತ್ತಾಳೆ. ಇಡೀ ಭಗವದ್ಗೀತೆಯನ್ನು ಈಕೆ ಸರಾಗವಾಗಿ ಹೇಳಬಲ್ಲಳು.

ಮೀರಠ್‌ನ ಸನಿವಾಸ ಅಂಧಮಕ್ಕಳ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕಲಿಯುತ್ತಿರುವ ರಿದಾ, ಎಂದಿಗೂ ಈ ಪವಿತ್ರ ಪುಸ್ತಕವನ್ನು ನೋಡಿಲ್ಲ. ಶೇಕಡ 80ರಷ್ಟು ಅಂಧತ್ವ ಈಕೆಗೆ ಹುಟ್ಟುವಾಗಲೇ ಇತ್ತು. ಬ್ರೈಲ್ ಲಿಪಿಯಲ್ಲಿ ಕೂಡಾ ಇದನ್ನು ಓದಿಲ್ಲ. ಶಾಲೆಯ ಶಿಕ್ಷಕರು ಆಕೆಗೆ ಇದನ್ನು ನೆನಪಿಟ್ಟುಕೊಳ್ಳುವಂತೆ ಸಹಕರಿಸಿದ್ದು, ಇಡೀ ಗೀತೆಯನ್ನು ಆಕೆಗೆ ಓದಿ ಹೇಳಿ ಕಂಠಪಾಠ ಮಾಡಿಸಲಾಗಿದೆ.


ಯಾವ ದೇವರನ್ನು ಪ್ರಾರ್ಥಿಸುತ್ತಿದ್ದೇನೆ ಎನ್ನುವುದು ಈ ಬಾಲಕಿಗೆ ಮುಖ್ಯವಲ್ಲ; ಏಕೆಂದರೆ ಎದುರಿಗೆ ಬಂದರೂ ಆಕೆ ನೋಡಲಾರಳು. "ದೇವರ ಪ್ರಾರ್ಥನೆಯನ್ನು ನಾನು ಇಷ್ಟಪಡುತ್ತೇನೆ. ಅದು ಭಗವದ್ಗೀತೆ ಅಥವಾ ಖುರಾನ್ ಯಾವುದೂ ಇರಬಹುದು. ಯಾವ ದೇವರನ್ನು ನಾನು ಪ್ರಾರ್ಥಿಸುತ್ತೇನೆ ಎನ್ನುವುದು ಮುಖ್ಯವಲ್ಲ. ಏಕೆಂದರೆ ದೇವರೇ ಎದುರು ಬಂದರೂ ನಾನು ನೋಡಲು ಸಾಧ್ಯವಿಲ್ಲ" ಎಂದು ಮೂರನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಹೇಳುತ್ತಾಳೆ.

ಮೀರಠ್‌ನ ಜಾಗೃತಿ ವಿಹಾರ ಬ್ರಿಜ್‌ಮೋಹನ್ ಅಂಧರ ಶಾಲೆಯಲ್ಲಿ ಈಕೆ ಓದುತ್ತಿದ್ದಾಳೆ.
ಝೆಹರ ಅವರ ಪೋಷಕರು ಮತ್ತು ಒಡಹುಟ್ಟಿದವರು ಲೋಹಿಯಾ ನಗರದಲ್ಲಿ ವಾಸವಿದ್ದು, ಬೇಸಿಗೆ ರಜೆ ಹಾಗೂ ಹಬ್ಬದ ದಿನಗಳಲ್ಲಿ ಕುಟುಂಬದ ಜತೆ ಈಕೆ ಸೇರಿಕೊಳ್ಳುತ್ತಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News