ಬೆಂಗಳೂರು : ಮಹಾತ್ಮ ಗಾಂಧಿ ರಸ್ತೆಯಲ್ಲಿ ನಡೆಸಲು ಉದ್ದೇಶಿಸಿದ್ದ "ತೆರೆದ ಬೀದಿ" ಕಾರ್ಯಕ್ರಮದ ಮುಂದೂಡಿಕೆ,
ಬೆಂಗಳೂರು,ಫೆ.16:ಮಹಾತ್ಮ ಗಾಂಧಿ ರಸ್ತೆಯಲ್ಲಿ ನಡೆಸಲು ಉದ್ದೇಶಿಸಿದ್ದ "ತೆರೆದ ಬೀದಿ" ಕಾರ್ಯಕ್ರಮವನ್ನು ಫೆಬ್ರವರಿ 21 ಕ್ಕೆ ಮುಂದೂಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತರು ತಿಳಿಸಿದ್ದಾರೆ.
ಕರಕುಶಲಕರ್ಮಿಗಳು ಹಾಗೂ ಸಾರ್ವಜನಿಕರ ಹೆಚ್ಚು ಪಾಲ್ಗೊಳ್ಳುವಿಕೆ ಬೇಡಿಕೆ ಹಿನ್ನೆಲೆಯಲ್ಲಿ ಬೆಂಗಳೂರು ಮಹಾತ್ಮಗಾಂಧಿ ರಸ್ತೆಯಲ್ಲಿನ ಅನಿಲ್ ಕುಂಬ್ಳೆ ವೃತ್ತದಿಂದ ಬಿಗ್ರೇಡ್ ರಸ್ತೆ ಜಂಕ್ಷನ್‌ವರೆಗೆ ಫೆಬ್ರವರಿ 21 ರಂದು ಬೆಳಿಗ್ಗೆ 9-00 ಗಂಟೆಯಿಂದ ರಾತ್ರಿ 9-00 ಗಂಟೆವರೆಗೆ "ತೆರೆದ ಬೀದಿ" ಓಪನ್ ಸ್ಟ್ರೀಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಸ್ಟಾಲ್‌ಗಳ ನೋಂದಣಿಗಾಗಿ ಬೆಳಿಗ್ಗೆ 11-00 ರಿಂದ ಸಂಜೆ 4-00 ಗಂಟೆ ಅವಧಿಯಲ್ಲಿ ಬೆಂಗಳೂರಿನ ಎಂ.ಜಿ. ರಸ್ತೆ ಮೆಟ್ರೋ ರಂಗೋಲಿಯಲ್ಲಿ ಹಾಗೂ ದೂರವಾಣಿ ಸಂಖ್ಯೆ 080-22969265, ಗ್ರಾಹಕ ಸಂಪರ್ಕ ಅಧಿಕಾರಿ ಬಿ. ವಿ. ಮಂಜುನಾಥ್ ಮೊಬೈಲ್ ಸಂಖ್ಯೆ 959110045, ಜೋಯಬ್ ಮೊ. ಸಂಖ್ಯೆ 9916261224 ಇವರನ್ನು ಸಂಪರ್ಕಿಸಲು ಕೋರಲಾಗಿದೆ.