ಕನ್ಹಯ್ಯ ವಿರುದ್ಧದ ದೇಶದ್ರೋಹದ ಆರೋಪ ಕೈ ಬಿಡಲಿದ್ದಾರೆ ದೆಹಲಿ ಪೊಲೀಸರು ?

Update: 2016-02-21 13:34 GMT

ಹೊಸದಿಲ್ಲಿ ,ಫೆ. 21 : ದೇಶಾದ್ಯಂತ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರೀ ವಿವಾದಕ್ಕೆ ಕಾರಣವಾಗಿರುವ  ಜೆ ಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಮೇಲಿನ ದೇಶದ್ರೋಹದ ಆರೋಪವನ್ನು ದೆಹಲಿ ಪೊಲೀಸರು ಕೈ ಬಿಡಲಿದ್ದಾರೆಯೇ ? ಹೌದು ಎನ್ನುತ್ತಿವೆ ಕೇಂದ್ರ ಗೃಹ ಸಚಿವಾಲಯದ ಮೂಲಗಳು. ಸಚಿವಾಲಯದ ಹಿರಿಯ ಅಧಿಕಾರಿಗಳ ಪ್ರಕಾರ ಕನ್ಹಯ್ಯ ಮೇಲಿನ ದೇಶದ್ರೋಹದ ಘೋಷಣೆ ಕೂಗಿದ ಆರೋಪವನ್ನು ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯ ದೆಹಲಿ ಪೋಲೀಸರ ಬಳಿ ಇಲ್ಲ .
ದೆಹಲಿ ಪೊಲೀಸ್ ಕಮಿಷನರ್ ಬಿ ಎಸ್ ಬಸ್ಸಿ ತಮ್ಮಲ್ಲಿ ಇದಕ್ಕೆ ಸಾಕ್ಷ್ಯ ಇದೆ ಎಂದು ಹೇಳಿದ್ದರೂ ಅವರು ಈಗ ಮತ್ತೆ ಫೆಬ್ರವರಿ 9 ರಂದು ನಡೆದ ಕಾರ್ಯಕ್ರಮದ  ಎಡಿಟ್ ಮಾಡದ ವೀಡಿಯೋ ನೀಡುವಂತೆ ಟಿವಿ ಚಾನೆಲ್ ಗಳನ್ನು ಕೇಳಿದ್ದಾರೆ. 
" ಸ್ವಲ್ಪ ವೀಡಿಯೋ ಫೂಟೇಜ್ ಇದೆ. ಆದರೆ ಅದರಲ್ಲಿ ಆಡಿಯೋ (ಧ್ವನಿ ) ಇಲ್ಲ. ಕನ್ಹಯ್ಯ ನಿಜವಾಗಿ ದೇಶವಿರೋಧಿ ಘೋಷಣೆ ಕೂಗಿದ್ದಾನೆ ಎನ್ನುವುದು ಅದರಿಂದ ಖಚಿತವಾಗುತ್ತಿಲ್ಲ. ಇದೇ ಪರಿಸ್ಥಿತಿ ಇದ್ದಲ್ಲಿ ,ದೋಷಾರೋಪ ಪಟ್ಟಿ ಸಲ್ಲಿಸುವಾಗ ಆತನ ವಿರುದ್ಧದ ದೇಶದ್ರೋಹದ ಆರೋಪವನ್ನು ಕೈ ಬಿದಬೇಕಾಗಬಹುದು " ಎಂದು ಕೇಂದ್ರ ಗೃಹ ಸಚಿವಾಲಯದ ಈ ಹಿರಿಯಧಿಕಾರಿ ಹೇಳಿದ್ದಾರೆ. 
ಅಧಿಕಾರಿಗಳ ಪ್ರಕಾರ ಪೊಲೀಸರಿಗೆ ವೀಡಿಯೋ ನೀಡಿರುವುದು ಕೆಲವು ವಿದ್ಯಾರ್ಥಿಗಳು. ಕಾರ್ಯಕಮದಲ್ಲಿ ಕೇವಲ ಒಂದೆರಡು ಟಿವಿ ಚಾನೆಲ್ ಗಳು ಮಾತ್ರ ಇದ್ದವು. ಎಫ್ ಐ ಆರ್ ಪ್ರಕಾರ ಅಲ್ಲಿ ಒಂದು ಪೊಲೀಸ್ ತಂಡವೂ ಇತ್ತು. ನಿಯಮಗಳ ಪ್ರಕಾರ ಯಾವುದೇ ಸಮಸ್ಯೆ ಆಗುವ ಸಂಶಯವಿದ್ದರೆ ಪೊಲೀಸರು ಅಂತಹ ಕಾರ್ಯಕ್ರಮಗಳ ವೀಡಿಯೋ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News