×
Ad

ವಾಚ್ ಗೆಳೆಯ ಕೊಟ್ಟದ್ದು: ಸಿದ್ದರಾಮಯ್ಯ

Update: 2016-02-25 16:46 IST

ಬೆಂಗಳೂರು: ಹಲವು ದಿನಗಳಿಂದ ಚರ್ಚೆಯ ಕೇಂದ್ರ ಬಿಂದುವಾಗಿರುವ ತನ್ನ ಕೈಗಡಿಯಾರದ ಮೂಲದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.


ಕೇರಳ ಮೂಲದ ಗಿರೀಶಚಂದ್ರ ವರ್ಮಾ ಎಂಬ ವೈದ್ಯರು ನನ್ನ ಆತ್ಮೀಯ ಗೆಳೆಯರು. ಜುಲೈ ತಿಂಗಳಲ್ಲಿ ಭಾರತಕ್ಕೆ ಬಂದಿದ್ದರು. 1983ರಿಂದಲೇ ನನಗೆ ಅವರ ಗೆಳೆತನವಿದೆ. ಅವರು ನನಗೆ ಜುಲೈ ತಿಂಗಳಲ್ಲಿ ವಾಚನ್ನು ಕೊಟ್ಟಿದ್ದರು. ನಾನೆಂದೂ ಐಷಾರಾಮಿ ಬದುಕನ್ನು ನಡೆಸಿದವನಲ್ಲ. ಕಳೆದ ನಾಲ್ಕು ತಿಂಗಳಿಂದ ಆ ವಾಚನ್ನು ಕಟ್ಟುತ್ತಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.


ನನ್ನ ಮಿತ್ರ ಈಗಾಗಲೇ ಈ ವಾಚ್ ಬಗ್ಗೆ ಕೋರ್ಟ್ ಅಫಿಡವಿಟ್ ಮಾಡಿ ಕೊಟ್ಟಿದ್ದಾರೆ. ಇಲ್ಲಿಗೆ ಬಂದಾಗ ಬಿಲ್ ಸೇರಿ ಎಲ್ಲ ದಾಖಲೆಗಳನ್ನು ನೀಡುತ್ತೇನೆ ಅಂದಿದ್ದಾರೆ. ದುಬೈನಲ್ಲಿ ಈ ವಾಚಿನ ಬೆಲೆ 75 ಸಾವಿರ ದಿರ್ಹಮ್ ಇದ್ದು, ಭಾರತದ ಹಣಕ್ಕೆ ಹೋಲಿಸಿದರೆ 8 ಲಕ್ಷ ರೂ.ಗಳಾಗುತ್ತವೆ. ನಾನು ಇನ್ನು ಮುಂದೆ ವಾಚ್ ಕಟ್ಟಲ್ಲ. ವಿಧಾನಸೌಧದ ಕ್ಯಾಬಿನೆಟ್ ಹಾಲ್ನಲ್ಲಿ ಈ ವಾಚನ್ನು ಇಡುತ್ತೇನೆ. ಲೋಕಾಯುಕ್ತಕ್ಕೆ ಜೂನ್‌ನಲ್ಲಿ ಆಸ್ತಿ ವಿವರ ನೀಡುವ ವೇಳೆ ಈ ಬಗ್ಗೆ ಮಾಹಿತಿ ನೀಡುತ್ತೇನೆ. ಜುಲೈನಲ್ಲಿ ತೆರಿಗೆ ಇಲಾಖೆಗೆ ಮಾಹಿತಿ ನೀಡುತ್ತೇನೆ. ಇದು ಸೆಕೆಂಡ್‌ಹ್ಯಾಂಡ್ ವಾಚ್ ಅಂತ ನನ್ನ ಸ್ನೇಹಿತ ಹೇಳಿದ್ದಾನೆ ಎಂದು ಅವರು ಹೇಳಿದರು.
 ನಾಳೆ ದಿಲ್ಲಿಗೆ ತೆರಳುತ್ತಿದ್ದು, ಹೈಕಮಾಂಡ್‌ಗೆ ಚುನಾವಣೆಯ ವಿವರ ನೀಡುತ್ತೇನೆ ಎಂದು ಸಿದ್ದರಾಮಯ್ಯ ಇದೇ ವೇಳೆ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News